ಒಂದನೇ ತರಗತಿ ಪ್ರವೇಶಾತಿಗೆ ವಯೋಮಿತಿ ಸಡಿಲಿಕೆ: ಶಿಕ್ಷಣ ಇಲಾಖೆಯ ಸ್ಪಷ್ಟನೆ

ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಕಡ್ಡಾಯವಾಗಿ 6 ವರ್ಷ ತುಂಬಿರಲೇಬೇಕು ಎಂಬ ನಿಯಮವನ್ನು ಮುಂದಿನ ವರ್ಷದಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಪ್ರಸಕ್ತ ಸಾಲಿನಲ್ಲಿ (2026-27) ನೀಡಲಾಗಿರುವ 60 ದಿನಗಳ ‘ವಯೋಮಿತಿ ಸಡಿಲಿಕೆ’ ಈ ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು, ಮುಂದಿನ ವರ್ಷದಿಂದ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

NEP ಹೊಸ ನಿಯಮವೇನು?: ಕೇಂದ್ರ ಸರ್ಕಾರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (NEP-2020) ಪ್ರಕಾರ ಶಾಲಾ ವ್ಯವಸ್ಥೆಯನ್ನು ‘5+3+3+4’ ಮಾದರಿಗೆ ಬದಲಾಯಿಸಲಾಗಿದೆ. ಇದರ ಮೊದಲ ಐದು ವರ್ಷಗಳನ್ನು ‘ಬುನಾದಿ ಹಂತ’ (Foundational Stage) ಎಂದು ಪರಿಗಣಿಸಲಾಗುತ್ತದೆ.

ಈ ನಿಯಮದ ಪ್ರಕಾರ ಮಗುವಿಗೆ ಸರಿಯಾಗಿ 6 ವರ್ಷ ತುಂಬಿದಾಗ ಮಾತ್ರ 1 ನೇ ತರಗತಿಗೆ ಪ್ರವೇಶ ನೀಡಬೇಕು ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲಾ ರಾಜ್ಯಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಆದರೆ, ಈ ನಿಯಮದ ಬಗ್ಗೆ ಅರಿವಿಲ್ಲದೆ ಈಗಾಗಲೇ ಎಲ್‌ಕೆಜಿ ಹಾಗೂ ಯುಕೆಜಿ ಓದುತ್ತಿರುವ ಮಕ್ಕಳ ವಯಸ್ಸಿನ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಿ ಪೋಷಕರಿಗೆ ತೊಂದರೆಯಾಗಬಾರದು ಎಂಬ ಒಂದೇ ಕಾರಣಕ್ಕೆ, ರಾಜ್ಯ ಸರ್ಕಾರವು ಈ ವರ್ಷ ಮಾತ್ರ 60 ದಿನಗಳ ವಿನಾಯಿತಿ (ರಿಯಾಯಿತಿ) ನೀಡಿದೆ. ಮುಂದಿನ ವರ್ಷದಿಂದ ಇದು ಅನ್ವಯವಾಗುವುದಿಲ್ಲ.

ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಆರಂಭದಲ್ಲಿ ನರ್ಸರಿಗೆ ಸೇರಿಸುವಾಗಲೇ ವಯಸ್ಸಿನ ಬಗ್ಗೆ ಎಚ್ಚರಿಕೆ ವಹಿಸಬೇಕು. ಸರಿಯಾಗಿ 3 ವರ್ಷ ತುಂಬಿದ ಮೇಲೆಯೇ ನರ್ಸರಿಗೆ ದಾಖಲಿಸಿದರೆ, ಮುಂದೆ 1 ನೇ ತರಗತಿಗೆ ಬರುವಾಗ ವಯಸ್ಸಿನ ಯಾವುದೇ ಅಡೆತಡೆ ಎದುರಾಗುವುದಿಲ್ಲ ಎಂದು ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ.

NEP ನಿಯಮನ್ವಯ ‘ಬುನಾದಿ ಹಂತದ’ ವಯಸ್ಸಿನ ಲೆಕ್ಕಾಚಾರ:

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನ್ವಯ ಶಾಲಾ ಪ್ರವೇಶಾತಿಗೆ ನಿಗದಿಪಡಿಸಿದ ವಯಸ್ಸು:

ಶಿಕ್ಷಣದ ಹಂತ ತರಗತಿ ಕಡ್ಡಾಯ ವಯಸ್ಸು
ಬುನಾದಿ ಹಂತ
(Foundational Stage)
ನರ್ಸರಿ / ಅಂಗನವಾಡಿ 3 ವರ್ಷ ಪೂರ್ಣ
ಎಲ್.ಕೆ.ಜಿ (LKG) 4 ವರ್ಷ ಪೂರ್ಣ
ಯು.ಕೆ.ಜಿ (UKG) 5 ವರ್ಷ ಪೂರ್ಣ
1ನೇ ತರಗತಿ 6 ವರ್ಷ ಪೂರ್ಣ

ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ₹60,000 ಉಚಿತ ಸಹಾಯಧನ

Leave a Comment