Gruhalakshmi Scheme Amount: ಗೃಹಲಕ್ಷ್ಮಿ 29ನೇ ಕಂತಿನ ಹಣ ರಿಲೀಸ್: ನಿಮ್ಮ ಖಾತೆಗೆ ₹2000 ಬಂತಾ? DBT Status ಚೆಕ್ ಮಾಡಿ

ಮನೆ ಒಡತಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ನೇರವಾಗಿ ಹಣ ವರ್ಗಾವಣೆ ಮಾಡುವ ‘ಗೃಹಲಕ್ಷ್ಮಿ’ ಯೋಜನೆಯಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡಿದೆ.

ಹೌದು, ಈವರೆಗೆ ಯಶಸ್ವಿಯಾಗಿ 28 ಕಂತುಗಳ ಹಣವನ್ನು ಪಡೆದುಕೊಂಡಿರುವ ಅರ್ಹ ಫಲಾನುಭವಿಗಳ ಖಾತೆಗಳಿಗೆ, ಬಹುನಿರೀಕ್ಷಿತ 29ನೇ ಕಂತಿನ ₹2,000 ಹಣ ಜಮಾ ಆಗುವ ಪ್ರಕ್ರಿಯೆ ಶುರುವಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಂತಹಂತವಾಗಿ ಹಣ ಬಿಡುಗಡೆಯಾಗುತ್ತಿದ್ದು, ಹಲವು ಮಹಿಳೆಯರ ಮೊಬೈಲ್‌ಗೆ ಈಗಾಗಲೇ ಹಣ ಕ್ರೆಡಿಟ್ ಆಗಿರುವ (Amount Credited) ಸಂದೇಶಗಳು ಬರಲಾರಂಭಿಸಿವೆ.

ಹಿಂದಿನ ಕೆಲವು ತಿಂಗಳುಗಳಲ್ಲಿ ಇ-ಕೆವೈಸಿ (e-KYC) ಪ್ರಕ್ರಿಯೆ, ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಸರ್ವರ್ ಸಮಸ್ಯೆಗಳಿಂದಾಗಿ ಹಣ ಬಿಡುಗಡೆಯಾಗುವುದು ತಡವಾಗುತ್ತಿತ್ತು.

ಆದರೆ, ಇದೀಗ ಆ ಎಲ್ಲಾ ತಾಂತ್ರಿಕ ಅಡೆತಡೆಗಳನ್ನು ಇಲಾಖೆ ನಿವಾರಿಸಿದೆ. 28ನೇ ಕಂತು ಪಡೆದಿರುವ ಪ್ರತಿಯೊಬ್ಬರಿಗೂ ಯಾವುದೇ ವಿಳಂಬವಿಲ್ಲದೆ ಡಿಬಿಟಿ (DBT) ಮೂಲಕ 29ನೇ ಕಂತಿನ ಹಣವನ್ನು ವರ್ಗಾಯಿಸಲಾಗುತ್ತಿದೆ.

ಹಣ ಜಮಾ ಆಗಿರುವ ಬಗ್ಗೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ?: ಗೃಹಲಕ್ಷ್ಮಿ ಯೋಜನೆಯ ₹2,000 ಹಣ ನಿಮ್ಮ ಖಾತೆಗೆ ಬಂದಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಬ್ಯಾಂಕ್‌ಗಳಿಗೆ ಅಥವಾ ಪೋಸ್ಟ್ ಆಫೀಸ್‌ಗಳಿಗೆ ಅಲೆಯುವ ಅವಶ್ಯಕತೆಯಿಲ್ಲ. ಈ ಕೆಳಗಿನ ಸರಳ ವಿಧಾನಗಳ ಮೂಲಕ ನೀವೇ ಖಚಿತಪಡಿಸಿಕೊಳ್ಳಬಹುದು.

  • DBT Karnataka App: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸರ್ಕಾರದ ಅಧಿಕೃತ ‘ಡಿಬಿಟಿ ಕರ್ನಾಟಕ’ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಲಾಗಿನ್ ಆದರೆ, 29ನೇ ಕಂತಿನ ಹಣ ಜಮಾ ಆಗಿರುವ ಸ್ಟೇಟಸ್ ನಿಮಗೆ ಸ್ಪಷ್ಟವಾಗಿ ಕಾಣುತ್ತದೆ.

ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ₹60,000 ಉಚಿತ ಸಹಾಯಧನ

ಕರ್ನಾಟಕದಲ್ಲಿ ಇಂದಿನ ಬಂಗಾರದ ದರ ಎಷ್ಟು?

Leave a Comment