ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶಿಕ್ಷಣ ಇಲಾಖೆಯು ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಬಹಳ ದಿನಗಳ ಕಾಯುವಿಕೆಗೆ ಕೊನೆಗೂ ಅಧಿಕೃತ ತೆರೆಬಿದ್ದಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಣೆಗೆ ಮುಹೂರ್ತ ಫಿಕ್ಸ್ ಮಾಡಿದೆ.
Karnataka 2nd PUC Result 2026 Date Time:
ಮಂಡಳಿಯ ಅಧಿಕೃತ ಮಾಧ್ಯಮ ಪ್ರಕಟಣೆಯ ಪ್ರಕಾರ, ನಾಳೆ ಅಂದರೆ ಏಪ್ರಿಲ್ 09, 2026 ರಂದು ಮಧ್ಯಾಹ್ನ 3.00 ಗಂಟೆಗೆ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಇದೇ ಸಮಯದಲ್ಲಿ ಆಯಾ ಕಾಲೇಜುಗಳಿಗೂ ಫಲಿತಾಂಶದ ಪಟ್ಟಿಯನ್ನು ಲಭ್ಯಗೊಳಿಸಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.
2nd PUC Result 2026 Link Karnataka Board:
ಮೊಬೈಲ್‌ನಲ್ಲೇ ರಿಸಲ್ಟ್ ಚೆಕ್ ಮಾಡುವುದು ಹೇಗೆ?: ಈ ಬಾರಿ ವಿದ್ಯಾರ್ಥಿಗಳು ಸರ್ವರ್ ಬ್ಯುಸಿ ಎಂಬ ಟೆನ್ಷನ್ ಇಲ್ಲದೆ, ಬಹಳ ಸುಲಭವಾಗಿ ಫಲಿತಾಂಶ ನೋಡಲು ಇಲಾಖೆ ಹಲವು ಹೊಸ ಅವಕಾಶಗಳನ್ನು ಕಲ್ಪಿಸಿದೆ:
- ವೆಬ್‌ಸೈಟ್ ಲಿಂಕ್: ವಿದ್ಯಾರ್ಥಿಗಳು ನಾಳೆ ಮಧ್ಯಾಹ್ನ 3 ಗಂಟೆಯ ನಂತರ ಇಲಾಖೆಯ ಅಧಿಕೃತ ವೆಬ್‌ಸೈಟ್ https://karresults.nic.in ಗೆ ಭೇಟಿ ನೀಡಿ ಫಲಿತಾಂಶ ಪಡೆಯಬಹುದು.
- ಮೊಬೈಲ್ ಆ್ಯಪ್: ಇದೇ ಮೊದಲ ಬಾರಿಗೆ ‘KarnatakaOne’ ಮೊಬೈಲ್ ಆ್ಯಪ್ (Mobile App) ಮೂಲಕವೂ ಅಂಕಪಟ್ಟಿಯನ್ನು ಸುಲಭವಾಗಿ ನೋಡುವ ವ್ಯವಸ್ಥೆ ಮಾಡಲಾಗಿದೆ.
- ನೇರ ವಾಟ್ಸಾಪ್/ಎಸ್‌ಎಂಎಸ್: ವೆಬ್‌ಸೈಟ್‌ಗೆ ಹೋಗದಿದ್ದರೂ ಚಿಂತೆಯಿಲ್ಲ! ವಿದ್ಯಾರ್ಥಿಗಳು ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಮಂಡಳಿಯಿಂದಲೇ ನೇರವಾಗಿ ವಾಟ್ಸಾಪ್ (WhatsApp) ಅಥವಾ ಎಸ್‌ಎಂಎಸ್ (SMS) ಮೂಲಕ ಫಲಿತಾಂಶದ ಮಾಹಿತಿಯನ್ನು ರವಾನಿಸಲಾಗುತ್ತದೆ.

How To Check 2nd PUC Result 2026 in DigiLocker:
ಈ ವರ್ಷದ ವಿಶೇಷ: ಡಿಜಿಲಾಕರ್‌ನಲ್ಲಿ (DigiLocker) ಒರಿಜಿನಲ್ ಮಾರ್ಕ್ಸ್ ಕಾರ್ಡ್! ಈ ವರ್ಷ ಪ್ರಥಮ ಬಾರಿಗೆ ವಿಶೇಷವಾಗಿ, ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ ಮೂಲಕವೂ ಒದಗಿಸಲಾಗುತ್ತಿದೆ.
- ನಾಳೆ (09-04-2026) ಮಧ್ಯಾಹ್ನ 3.00 ಗಂಟೆಯಿಂದಲೇ https://www.digilocker.gov.in ವೆಬ್‌ಸೈಟ್ ಅಥವಾ App ಬಳಸಿ ನಿಮ್ಮ ಅಧಿಕೃತ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
- ಡಿಜಿಲಾಕರ್‌ನಿಂದ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳುವ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯಲು, ಇಲಾಖೆಯು ವಿಡಿಯೋ ಲಿಂಕ್ ಒಂದನ್ನು ಬಿಡುಗಡೆ ಮಾಡಿದ್ದು, https://tinyurl.com/mw84wmh9 ಲಿಂಕ್ ಬಳಸಿ ವಿಡಿಯೋ ನೋಡಬಹುದಾಗಿದೆ.
ವಿದ್ಯಾರ್ಥಿಗಳೇ, ನಾಳೆ ಮಧ್ಯಾಹ್ನ 3 ಗಂಟೆಗೆ ನಿಮ್ಮ ಶ್ರಮದ ಫಲಿತಾಂಶ ಹೊರಬೀಳಲಿದೆ. ಇಲಾಖೆಯು ನೇರವಾಗಿ ನಿಮ್ಮ ಮೊಬೈಲ್‌ಗೇ ಮೆಸೇಜ್ ಕಳುಹಿಸುವ ವ್ಯವಸ್ಥೆ ಮಾಡಿರುವುದರಿಂದ ಯಾವುದೇ ಗಡಿಬಿಡಿ ಅಥವಾ ಆತಂಕ ಬೇಡ. ಡಿಜಿಲಾಕರ್ ಆ್ಯಪ್ ಅನ್ನು ಈಗಲೇ ಇನ್‌ಸ್ಟಾಲ್ ಮಾಡಿಕೊಂಡು ಸಿದ್ಧವಾಗಿರಿ. ಎಲ್ಲರಿಗೂ ಆಲ್ ದಿ ಬೆಸ್ಟ್!