FDA, SDA ಹುದ್ದೆಗಳ ನೇಮಕಾತಿ 2026: ಆನ್‌ಲೈನ್‌ ಅರ್ಜಿ ಆಹ್ವಾನ

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ (BDCC) ಖಾಲಿ ಇರುವ ವಿವಿಧ 82 ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ (PUC) ಹಾಗೂ ಪದವಿ (Degree) ಮುಗಿಸಿದ ಅಭ್ಯರ್ಥಿಗಳಿಗೆ ಈ ಉದ್ಯೋಗವಕಾಶವಾಗಿದ್ದು, ಆಸಕ್ತರು ಆನ್‌ಲೈನ್ ಮೂಲಕ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಯಾವೆಲ್ಲಾ ಹುದ್ದೆಗಳು ಖಾಲಿ ಇವೆ? ಶೈಕ್ಷಣಿಕ ಅರ್ಹತೆ ಏನಿರಬೇಕು? ಅರ್ಜಿ ಸಲ್ಲಿಕೆ ಹೇಗೆ? ಮುಂತಾದ ಸಂಪೂರ್ಣ ಮಾಹಿತಿ ಇಲ್ಲಿದೆ:

Bellary DCC Bank Recruitment 2026 ಸಂಕ್ಷಿಪ್ತ ವಿವರ

  • ಸಂಸ್ಥೆಯ ಹೆಸರು: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಹೊಸಪೇಟೆ.
  • ಒಟ್ಟು ಹುದ್ದೆಗಳ ಸಂಖ್ಯೆ: 82 ಹುದ್ದೆಗಳು.
  • ಉದ್ಯೋಗ ಸ್ಥಳ: ಬಳ್ಳಾರಿ.
  • ಸಂಬಳ: ಮಾಸಿಕ ₹29,600 ದಿಂದ ₹83,700 ರವರೆಗೆ

ಯಾವ ಹುದ್ದೆಗೆ ಎಷ್ಟು ಖಾಲಿ? ವಿದ್ಯಾರ್ಹತೆ ಮತ್ತು ಸಂಬಳದ ವಿವರ:

1. ವ್ಯವಸ್ಥಾಪಕರು/ ಪ್ರಥಮ ದರ್ಜೆ ಸಹಾಯಕರು (FDA) – 22 ಹುದ್ದೆಗಳು

  • ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Degree) ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯ.
  • ವೇತನ ಶ್ರೇಣಿ: ₹44,425 – ₹83,700 ರವರೆಗೆ.

2. ದ್ವಿತೀಯ ದರ್ಜೆ ಸಹಾಯಕರು (SDA) – 28 ಹುದ್ದೆಗಳು

  • ವಿದ್ಯಾರ್ಹತೆ: ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆ ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯ.
  • ವೇತನ ಶ್ರೇಣಿ: ₹34,100 – ₹67,600 ರವರೆಗೆ.

3. ಕಿರಿಯ ಸೇವಕರು (Junior Servants) – 31 ಹುದ್ದೆಗಳು

  • ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ (SSLC) ಯಲ್ಲಿ ಉತ್ತೀರ್ಣರಾಗಿರಬೇಕು (ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು).
  • ವೇತನ ಶ್ರೇಣಿ: ₹29,600 – ₹52,800 ರವರೆಗೆ.

4. ವಾಹನ ಚಾಲಕರು (Driver) – 1 ಹುದ್ದೆ

  • ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಜೊತೆಗೆ ಕಾನೂನುಬದ್ಧ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
  • ವೇತನ ಶ್ರೇಣಿ: ₹31,775 – ₹61,300 ರವರೆಗೆ.

ವಯೋಮಿತಿ (Age Limit): ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು.

  • ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ: ಗರಿಷ್ಠ 35 ವರ್ಷ.
  • 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷ.
  • SC, ST, ಪ್ರವರ್ಗ-1 ರ ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷ. (ವಿಶೇಷ ಸೂಚನೆ: ಸರ್ಕಾರದ ಇತ್ತೀಚಿನ ಆದೇಶದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ).

ಅರ್ಜಿ ಶುಲ್ಕದ ವಿವರ:

  • ಸಾಮಾನ್ಯ ಮತ್ತು ಇತರೆ (2A, 2B, 3A, 3B) ಅಭ್ಯರ್ಥಿಗಳಿಗೆ: ₹1,000/- (ಗೇಟ್ ವೇ ಶುಲ್ಕ ಪ್ರತ್ಯೇಕ).
  • SC/ ST, ಪ್ರವರ್ಗ-1, ಮಾಜಿ ಸೈನಿಕ ಮತ್ತು PWD ಅಭ್ಯರ್ಥಿಗಳಿಗೆ: ₹500/- (ಗೇಟ್ ವೇ ಶುಲ್ಕ ಪ್ರತ್ಯೇಕ).
  • ಪಾವತಿ ವಿಧಾನ: ಶುಲ್ಕವನ್ನು ಕೇವಲ ಆನ್‌ಲೈನ್ ಮೂಲಕ (ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್, ಯುಪಿಐ) ಮಾತ್ರ ಪಾವತಿಸಬೇಕು. ಡಿ.ಡಿ. / ಪೋಸ್ಟಲ್ ಆರ್ಡರ್ ಅವಕಾಶವಿಲ್ಲ.

Selection Process: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ (Written Exam) ಹಾಗೂ 15 ಅಂಕಗಳ ಸಂದರ್ಶನವನ್ನು (Interview) ನಡೆಸುವ ಮೂಲಕ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

  • ಎಫ್‌ಡಿಎ ಮತ್ತು ಎಸ್‌ಡಿಎ (FDA & SDA) ಹುದ್ದೆಗಳಿಗೆ: ಒಟ್ಟು 200 ಅಂಕಗಳ ಲಿಖಿತ ಪರೀಕ್ಷೆ ಇರಲಿದ್ದು (ಕನ್ನಡ-50, ಇಂಗ್ಲಿಷ್-25, ಜಿಕೆ-25, ಸಹಕಾರ ವಿಷಯ-50, ಸಂವಿಧಾನ-25, ಬ್ಯಾಂಕಿಂಗ್-25), ಪರೀಕ್ಷಾ ಅವಧಿ 2 ಗಂಟೆ ಇರುತ್ತದೆ.
  • ಚಾಲಕ ಮತ್ತು ಕಿರಿಯ ಸೇವಕ ಹುದ್ದೆಗಳಿಗೆ: ಒಟ್ಟು 100 ಅಂಕಗಳ ಲಿಖಿತ ಪರೀಕ್ಷೆ ಇರಲಿದ್ದು (ಕನ್ನಡ-50, ಸಾಮಾನ್ಯ ಜ್ಞಾನ-50), ಪರೀಕ್ಷಾ ಅವಧಿ 1 ಗಂಟೆ ಇರುತ್ತದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 06-04-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-05-2026

Bellary DCC Bank Recruitment 2026 ಪ್ರಮುಖ ಲಿಂಕ್‌ಗಳು:

ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಬಳ್ಳಾರಿ ಡಿಸಿಸಿ ಬ್ಯಾಂಕ್‌ನ ಅಧಿಕೃತ ಜಾಲತಾಣವಾದ www.bellarydcc.bank.in ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು. ನಿಮ್ಮ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ಮೂಲಕ ರಿಜಿಸ್ಟರ್ (OTP ಮೂಲಕ) ಮಾಡಿಕೊಂಡು, ಕೇವಲ ಆನ್‌ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು. ಅಗತ್ಯ ದಾಖಲೆಗಳು, ಭಾವಚಿತ್ರ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದು ಕಡ್ಡಾಯ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2026

Leave a Comment