ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ.
ಕಳೆದ ತಿಂಗಳು 27ನೇ ಕಂತಿನ ಹಣವನ್ನು ಪಡೆದಿದ್ದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಇದೀಗ 28ನೇ ಕಂತಿನ ಹಣ ಜಮಾ ಆಗಲು ಶುರುವಾಗಿದೆ.
ಹಣಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ಮಹಿಳೆಯರ ಮೊಬೈಲ್‌ಗೆ ಇದೀಗ ಬ್ಯಾಂಕ್ ಕಡೆಯಿಂದ ₹2,000 ಜಮಾ ಆಗಿರುವ (Amount Credited) ಮೆಸೇಜ್‌ಗಳು ಬರಲಾರಂಭಿಸಿವೆ.

ಈ ಹಿಂದೆ ಇ-ಕೆವೈಸಿ (Gruha Lakshmi Scheme e-KYC) ಹಾಗೂ ರೇಷನ್ ಕಾರ್ಡ್ ಪರಿಶೀಲನೆಯಂತಹ ಸಮಸ್ಯೆಗಳಿಂದಾಗಿ ಹಣ ವಿಳಂಬವಾಗುತ್ತಿತ್ತು.
ಇಲಾಖೆಯು ಈ ಹಿಂದಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಿದ್ದು, ಮಾರ್ಚ್ ತಿಂಗಳಿನ 27ನೇ ಕಂತು ಪಡೆದವರ ಖಾತೆಗಳಿಗೆ ಇದೀಗ 28ನೇ ಕಂತಿನ ಹಣವನ್ನು ಯಾವುದೇ ವಿಳಂಬವಿಲ್ಲದೆ ಡಿಬಿಟಿ (DBT) ಮೂಲಕ ವರ್ಗಾಯಿಸುತ್ತಿದೆ.
ಕೆಲವು ಜಿಲ್ಲೆಗಳಲ್ಲಿ ಹಂತ-ಹಂತವಾಗಿ ಹಣ ಬಿಡುಗಡೆಯಾಗುತ್ತಿದ್ದು, ದಾಖಲೆಗಳು ಸರಿಯಾಗಿರುವ ಪ್ರತಿಯೊಬ್ಬ ಅರ್ಹ ಮಹಿಳೆಗೂ ಹಣ ತಲುಪುತ್ತಿದೆ.
How To Check Gruha Lakshmi Scheme DBT Status Check:
ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನೀವು ಬ್ಯಾಂಕ್‌ಗೆ ಅಲೆಯುವ ಅಗತ್ಯವಿಲ್ಲ.
ನಿಮ್ಮ ಮೊಬೈಲ್‌ನಲ್ಲಿ ‘DBT Karnataka’ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು, ಆಧಾರ್ ನಂಬರ್ ಹಾಕಿ ಲಾಗಿನ್ ಆಗುವ ಮೂಲಕ, ನಿಮ್ಮ ಖಾತೆಗೆ 28ನೇ ಕಂತಿನ ಹಣ ಜಮಾ ಆಗಿರುವ ಸ್ಟೇಟಸ್ ಅನ್ನು ಕ್ಷಣಾರ್ಧದಲ್ಲಿ ತಿಳಿಯಬಹುದು.
ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ (Grama One), ಕರ್ನಾಟಕ ಒನ್ ಅಥವಾ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ‘ಮಾಹಿತಿ ಕಣಜ’ (Mahiti Kanaja) ಪೋರ್ಟಲ್ ಮೂಲಕವೂ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.