2nd PUC Result 2026 Today: ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ; ಹೀಗೆ ಚೆಕ್ ಮಾಡಿ

ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ 2026 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶಕ್ಕಾಗಿ ಕಾಯುತ್ತಿರುವ 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಎದೆಬಡಿತ ಈಗ ಜೋರಾಗಿದೆ.

ಹೌದು, ವಿದ್ಯಾರ್ಥಿಗಳು ಹಾಗೂ ಪೋಷಕರ ಬಹುದಿನಗಳ ನಿರೀಕ್ಷೆಗೆ ಇಂದೇ ತೆರೆಬೀಳಲಿದ್ದು, ಇಂದು (ಏಪ್ರಿಲ್ 09, 2026) ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಉಪಚುನಾವಣೆಯ ನೀತಿ ಸಂಹಿತೆಯ ಗೊಂದಲಗಳಿಂದಾಗಿ ವಿಳಂಬವಾಗಿದ್ದ ರಿಸಲ್ಟ್, ಇಂದು ಮಧ್ಯಾಹ್ನ 3 ಗಂಟೆಗೆ ವಿದ್ಯಾರ್ಥಿಗಳ ಕೈಸೇರಲಿದೆ.

2nd PUC Result 2026 ಫಲಿತಾಂಶ ಚೆಕ್ ಮಾಡುವುದು ಹೇಗೆ?:

ಇಲ್ಲಿದೆ 4 ಸರಳ ವಿಧಾನ: ಸರ್ವರ್ ಡೌನ್ ಆಗುವ ಟೆನ್ಷನ್ ಇಲ್ಲದೆ, ವಿದ್ಯಾರ್ಥಿಗಳು ಬಹಳ ಸುಲಭವಾಗಿ ತಮ್ಮ ಅಂಕಗಳನ್ನು ನೋಡಲು ಮಂಡಳಿಯು ಈ ಬಾರಿ 4 ಹೊಸ ವ್ಯವಸ್ಥೆಗಳನ್ನು ಮಾಡಿದೆ.

  1. ವೆಬ್‌ಸೈಟ್: ಇಂದು ಮಧ್ಯಾಹ್ನ 3 ಗಂಟೆಯ ನಂತರ ಇಲಾಖೆಯ ಅಧಿಕೃತ ವೆಬ್‌ಸೈಟ್ https://karresults.nic.in ಗೆ ಭೇಟಿ ನೀಡಿ ರಿಜಿಸ್ಟ್ರೇಷನ್ ನಂಬರ್ ಹಾಕಿ ರಿಸಲ್ಟ್ ಪಡೆಯಬಹುದು.
  2. KarnatakaOne ಆ್ಯಪ್: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ‘KarnatakaOne Mobile App’ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕವೂ ಕ್ಷಣಾರ್ಧದಲ್ಲಿ ಫಲಿತಾಂಶ ವೀಕ್ಷಿಸಬಹುದು.
  3. ವಾಟ್ಸಾಪ್ / ಎಸ್‌ಎಂಎಸ್ ಮೆಸೇಜ್: ನೀವು ಇಂಟರ್ನೆಟ್ ಕೆಫೆಗೆ ಹೋಗಬೇಕಿಲ್ಲ! ವಿದ್ಯಾರ್ಥಿಗಳು ಇಲಾಖೆಯಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಮಂಡಳಿಯಿಂದಲೇ ನೇರವಾಗಿ ವಾಟ್ಸಾಪ್ (WhatsApp) ಅಥವಾ ಎಸ್‌ಎಂಎಸ್ (SMS) ಮೂಲಕ ನಿಮ್ಮ ಅಂಕಗಳ ಮಾಹಿತಿಯನ್ನು ಕಳುಹಿಸಲಾಗುತ್ತದೆ.
  4. ಡಿಜಿಲಾಕರ್‌ನಲ್ಲಿ ಒರಿಜಿನಲ್ ಅಂಕಪಟ್ಟಿ: ಈ ವರ್ಷದ ಬಹುದೊಡ್ಡ ವಿಶೇಷವೆಂದರೆ, ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು (Marks Card) ‘ಡಿಜಿಲಾಕರ್’ (DigiLocker) ಮೂಲಕ ಒದಗಿಸಲಾಗುತ್ತಿದೆ. ಮಧ್ಯಾಹ್ನ 3 ಗಂಟೆಯ ನಂತರ https://www.digilocker.gov.in ವೆಬ್‌ಸೈಟ್ ಬಳಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ವಿದ್ಯಾರ್ಥಿಗಳೇ, ನಿಮ್ಮ ವರ್ಷದ ಕಠಿಣ ಶ್ರಮದ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ನಿಮ್ಮ ಕೈಸೇರಲಿದೆ. ಮಂಡಳಿಯೇ ನಿಮ್ಮ ವಾಟ್ಸಾಪ್‌ಗೆ ರಿಸಲ್ಟ್ ಕಳುಹಿಸುವ ವ್ಯವಸ್ಥೆ ಮಾಡಿರುವುದರಿಂದ, ವೆಬ್‌ಸೈಟ್ ಓಪನ್ ಆಗುತ್ತಿಲ್ಲ ಎಂದು ಆತಂಕ ಪಡುವ ಅಗತ್ಯವಿಲ್ಲ. ಫಲಿತಾಂಶ ಏನೇ ಬಂದರೂ ಅದನ್ನು ಧೈರ್ಯವಾಗಿ ಸ್ವೀಕರಿಸಿ, ನಿಮ್ಮ ಮುಂದಿನ ಭವಿಷ್ಯದ ಕಡೆ ಗಮನ ಹರಿಸಿ. ಎಲ್ಲರಿಗೂ ಆಲ್ ದಿ ಬೆಸ್ಟ್!

FDA, SDA ಹುದ್ದೆಗಳ ನೇಮಕಾತಿ 2026: ಆನ್‌ಲೈನ್‌ ಅರ್ಜಿ ಆಹ್ವಾನ

Leave a Comment