12th PUC Result 2026 OUT: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಅಧಿಕೃತ ವೆಬ್‌ಸೈಟ್‌ನಲ್ಲಿ ರಿಸಲ್ಟ್‌ ಲಭ್ಯ

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರ ಕಾಯುವಿಕೆಗೆ ಕೊನೆಗೂ ತೆರೆಬಿದ್ದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ವಿದ್ಯಾರ್ಥಿಗಳು ಈಗ ತಮ್ಮ ಅಂಕಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ವೀಕ್ಷಿಸಬಹುದಾಗಿದೆ.

How to Check 12th PUC Result 2026:

ಒಂದೇ ಬಾರಿಗೆ ಲಕ್ಷಾಂತರ ಜನರು ವೆಬ್‌ಸೈಟ್‌ಗೆ ಭೇಟಿ ನೀಡುವುದರಿಂದ ಸರ್ವರ್ ನಿಧಾನವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ಯಾವುದೇ ಗೊಂದಲವಿಲ್ಲದೆ ಸುಲಭವಾಗಿ ಫಲಿತಾಂಶ ನೋಡಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ:

  • ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ ‘II PUC EXAM-1 RESULT 2026 announced on 09/04/2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ Registration Number ಮತ್ತು ನಿಮ್ಮ ವಿಷಯದ ವಿಭಾಗವನ್ನು ನಮೂದಿಸಿ.
  • ‘ಸಬ್‌ಮಿಟ್’ ಬಟನ್ ಒತ್ತಿದ ತಕ್ಷಣ ನಿಮ್ಮ ಅಂಕಪಟ್ಟಿ ತೆರೆಯ ಮೇಲೆ ಕಾಣಿಸುತ್ತದೆ.
  • ಡಿಜಿಲಾಕರ್ (DigiLocker) ಸೌಲಭ್ಯ: ಈ ಬಾರಿ ವಿದ್ಯಾರ್ಥಿಗಳ ಮೂಲ ಅಂಕಪಟ್ಟಿಯನ್ನು ಡಿಜಿಲಾಕರ್‌ನಲ್ಲೂ ಒದಗಿಸಲಾಗುತ್ತಿದೆ. https://www.digilocker.gov.in ಮೂಲಕ ಲಾಗಿನ್ ಆಗಿ ನಿಮ್ಮ ಡಿಜಿಟಲ್ ಮಾರ್ಕ್ಸ್ ಕಾರ್ಡ್ ಅನ್ನು ಸುರಕ್ಷಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
  • ಮೊಬೈಲ್ ಆ್ಯಪ್: ‘KarnatakaOne’ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕವೂ ಸುಲಭವಾಗಿ ಫಲಿತಾಂಶ ವೀಕ್ಷಿಸಬಹುದು.
  • ಎಸ್ಎಂಎಸ್/ವಾಟ್ಸಾಪ್: ಕಾಲೇಜುಗಳಲ್ಲಿ ನೋಂದಾಯಿಸಿರುವ ನಿಮ್ಮ ಮೊಬೈಲ್ ಸಂಖ್ಯೆಗೆ ಮಂಡಳಿಯಿಂದಲೇ ನೇರವಾಗಿ ವಾಟ್ಸಾಪ್ ಹಾಗೂ ಎಸ್‌ಎಂಎಸ್ ಮೂಲಕ ಫಲಿತಾಂಶವನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ನಿಮ್ಮ ಇನ್‌ಬಾಕ್ಸ್ ಒಮ್ಮೆ ಪರಿಶೀಲಿಸಿ.

ಫಲಿತಾಂಶ ವಿಳಂಬವಾಗಿದ್ದೇಕೆ? ಇಲ್ಲಿದೆ ನೈಜ ಕಾರಣ ವಾಸ್ತವದಲ್ಲಿ ಈ ಬಾರಿಯ ಫಲಿತಾಂಶ ಏಪ್ರಿಲ್ 7 ರಂದೇ ಪ್ರಕಟವಾಗಬೇಕಿತ್ತು. ಮಂಡಳಿಯು ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ಆದರೆ, ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಏಪ್ರಿಲ್ 9 ರಂದು ಮತದಾನ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಚುನಾವಣಾ ನೀತಿ ಸಂಹಿತೆಯಿಂದಾಗಿ, ಶಿಕ್ಷಣ ಸಚಿವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಫಲಿತಾಂಶ ಘೋಷಿಸಲು ಚುನಾವಣಾ ಆಯೋಗದ ಅನುಮತಿ ಪಡೆಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದೇ ಕಾರಣಕ್ಕೆ ಫಲಿತಾಂಶ ಎರಡು ದಿನಗಳ ಕಾಲ ವಿಳಂಬವಾಗಿ, ಇಂದು ಪ್ರಕಟಗೊಂಡಿದೆ.

ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಒಂದು ಕಿವಿಮಾತು ಪರೀಕ್ಷೆ ಮತ್ತು ಅದರ ಫಲಿತಾಂಶ ವಿದ್ಯಾರ್ಥಿ ಜೀವನದ ಒಂದು ಪ್ರಮುಖ ಘಟ್ಟವೇ ಹೊರತು, ಅದೇ ಜೀವನದ ಅಂತಿಮ ತೀರ್ಮಾನವಲ್ಲ. ನೀವು ನಿರೀಕ್ಷಿಸಿದಷ್ಟೇ ಅಂಕಗಳು ಬಂದರೆ ಸಂಭ್ರಮಿಸಿ. ಒಂದು ವೇಳೆ ಅಂಕಗಳು ಕಡಿಮೆಯಾದರೆ ಅಥವಾ ನಿರೀಕ್ಷಿತ ಫಲಿತಾಂಶ ಬರದಿದ್ದರೆ ಎದೆಗುಂದದಿರಿ. ಮುಂದಿನ ದಿನಗಳಲ್ಲಿ ಪೂರಕ ಪರೀಕ್ಷೆಗಳ ಮೂಲಕ ಅಥವಾ ಮರುಮೌಲ್ಯಮಾಪನದ ಮೂಲಕ ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಪೋಷಕರು ಈ ಸಮಯದಲ್ಲಿ ಮಕ್ಕಳ ಬೆಂಬಲಕ್ಕೆ ನಿಲ್ಲುವುದು ಅತ್ಯಂತ ಅವಶ್ಯಕ.

ಎಲ್ಲಾ ವಿದ್ಯಾರ್ಥಿಗಳಿಗೂ ಉಜ್ವಲ ಭವಿಷ್ಯ ಸಿಗಲಿ.

FDA, SDA ಹುದ್ದೆಗಳ ನೇಮಕಾತಿ 2026: ಆನ್‌ಲೈನ್‌ ಅರ್ಜಿ ಆಹ್ವಾನ

Leave a Comment