ದ್ವಿತೀಯ ಪಿಯುಸಿ ‘ಪರೀಕ್ಷೆ-2’ ಬರೆಯಲು ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಹಾಗೂ ಬಿಎಂಟಿಸಿ (BMTC) ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ಯಾವುದೇ ಟೆನ್ಷನ್ ಇಲ್ಲದೆ ತೆರಳಲು ಅನುಕೂಲವಾಗುವಂತೆ ಬಿಎಂಟಿಸಿ ಬಸ್ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಜ್ಯಾದ್ಯಂತ ಏಪ್ರಿಲ್ 30 ರಿಂದ ಮೇ 13 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-2 ನಿಗದಿಯಾಗಿದ್ದು, ಈ ಎಲ್ಲಾ ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಡೆಯಲಿದ್ದಾರೆ.
ಯಾವೆಲ್ಲಾ ಷರತ್ತುಗಳಿವೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್:
- ಹಾಲ್ ಟಿಕೆಟ್ ಕಡ್ಡಾಯ: ಉಚಿತ ಪ್ರಯಾಣದ ಲಾಭ ಪಡೆಯಲು ವಿದ್ಯಾರ್ಥಿಗಳು ಬಸ್ ಹತ್ತಿದ ತಕ್ಷಣ ನಿರ್ವಾಹಕರಿಗೆ (ಕಂಡಕ್ಟರ್) ತಮ್ಮ ಪರೀಕ್ಷಾ ಪ್ರವೇಶ ಪತ್ರವನ್ನು (ಹಾಲ್ ಟಿಕೆಟ್) ಕಡ್ಡಾಯವಾಗಿ ತೋರಿಸಬೇಕು.
- ಎಲ್ಲಿಂದ ಎಲ್ಲಿಗೆ?: ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ (ಮನೆ/ಪಿಜಿ) ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ತೆರಳುವಾಗ ಹಾಗೂ ಪರೀಕ್ಷೆ ಮುಗಿಸಿ ಅಲ್ಲಿಂದ ವಾಪಸ್ ಮನೆಗೆ ಹಿಂದಿರುಗುವಾಗ ಮಾತ್ರ ಈ ಉಚಿತ ಸೇವೆ ಬಳಸಿಕೊಳ್ಳಬಹುದು.
- ಸಾಮಾನ್ಯ ಬಸ್ಗಳಿಗೆ ಮಾತ್ರ ಸೀಮಿತ: ಈ ಉಚಿತ ಪ್ರಯಾಣದ ವ್ಯವಸ್ಥೆಯು ಕೇವಲ ಬಿಎಂಟಿಸಿಯ ‘ಸಾಮಾನ್ಯ ಬಸ್ಗಳಲ್ಲಿ’ (Ordinary Buses) ಪ್ರಯಾಣಿಸುವವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. (ಗಮನಿಸಿ: ವೋಲ್ವೋ ಅಥವಾ ಹವಾನಿಯಂತ್ರಿತ ಬಸ್ಗಳಿಗೆ ಇದು ಅನ್ವಯಿಸುವುದಿಲ್ಲ).
ಪರೀಕ್ಷಾ ಸಮಯದಲ್ಲಿ ಟ್ರಾಫಿಕ್ ಕಿರಿಕಿರಿ ಹಾಗೂ ಚಿಲ್ಲರೆ ಸಮಸ್ಯೆಯಿಂದ ವಿದ್ಯಾರ್ಥಿಗಳು ಪರದಾಡುವುದನ್ನು ತಪ್ಪಿಸಲು ಸರ್ಕಾರ ಈ ವಿದ್ಯಾರ್ಥಿಸ್ನೇಹಿ ನಿರ್ಧಾರ ಕೈಗೊಂಡಿದೆ. ಪರೀಕ್ಷೆ-2 ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಆಲ್ ದಿ ಬೆಸ್ಟ್!
ಒಳ ಮೀಸಲಾತಿ ಹಂಚಿಕೆಯ ‘ತ್ರಿ-ಸೂತ್ರ’ ಫೈನಲ್: ಯಾವ ಸಮುದಾಯಕ್ಕೆ ಎಷ್ಟು ಪಾಲು?