ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಾಲಿಕೆಯ ಕಾನೂನು ಕೋಶದ ಮುಖ್ಯಸ್ಥರ ಕಚೇರಿಯಲ್ಲಿ ಖಾಲಿ ಇರುವ ‘ಕಾನೂನು ಸಹಾಯಕರು’ (Legal Assistant) ಹುದ್ದೆಗಳನ್ನು ಭರ್ತಿ ಮಾಡಲು ಈ ಪ್ರಕಟಣೆ ಹೊರಡಿಸಲಾಗಿದೆ.
ಉದ್ಯೋಗದ ನಿರೀಕ್ಷೆಯಲ್ಲಿರುವ ಕಾನೂನು ಪದವೀಧರರಿಗೆ ಹಾಗೂ ಹೊಸದಾಗಿ ವಕೀಲ ವೃತ್ತಿ ಆರಂಭಿಸಿರುವ ಯುವ ಪ್ರತಿಭೆಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ಕೇವಲ ನೇರ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಹುದ್ದೆಯ ವಿವರ ಮತ್ತು ಅರ್ಹತೆಗಳು:
- ಹುದ್ದೆಯ ಹೆಸರು: ಕಾನೂನು ಸಹಾಯಕರು (Legal Assistant)
- ಒಟ್ಟು ಹುದ್ದೆಗಳು: 2
- ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ (Law Degree) ಪಡೆದಿರಬೇಕು. ಅಥವಾ ಹೊಸದಾಗಿ ವಕೀಲ ವೃತ್ತಿಯನ್ನು ಆರಂಭಿಸಿರುವವರು ಅರ್ಜಿ ಸಲ್ಲಿಸಲು ಅರ್ಹರು.
- ಉದ್ಯೋಗದ ಸ್ವರೂಪ: ಇದು ಕಾಯಂ ಹುದ್ದೆಯಾಗಿರದೆ, 11 ತಿಂಗಳ ಅವಧಿಗೆ ಗುತ್ತಿಗೆ/ತಾತ್ಕಾಲಿಕ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
- ಸಂಭಾವನೆ (ವೇತನ): ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 30,000 ರೂ. ಗಳ ನಿಗದಿತ ಸಂಭಾವನೆ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ ಹೇಗೆ? ಅಭ್ಯರ್ಥಿಗಳನ್ನು ಕೇವಲ ನೇರ ಸಂದರ್ಶನದ (Direct Interview) ಮೂಲಕ ಶಾರ್ಟ್‌ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಸಂಪೂರ್ಣ ಬಯೋ-ಡೇಟಾ (Bio-data) ಮತ್ತು ಅಗತ್ಯ ಶೈಕ್ಷಣಿಕ ದಾಖಲೆಗಳ ಅಧಿಕೃತ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-05-2026 (ಮೇ 5, 2026ರ ಒಳಗೆ ಕಚೇರಿಗೆ ತಲುಪುವಂತೆ ಕಳುಹಿಸಬೇಕು).
- ಗಮನಿಸಿ: ಅರ್ಜಿ ಸಲ್ಲಿಸುವ ಲಕೋಟೆಯ (Envelope) ಮೇಲ್ಭಾಗದಲ್ಲಿ “ಕಾನೂನು ಸಹಾಯಕರು ಹುದ್ದೆಗೆ ಅರ್ಜಿ” ಎಂದು ಕಡ್ಡಾಯವಾಗಿ, ಸ್ಪಷ್ಟವಾಗಿ ನಮೂದಿಸಿರಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ: ಆಯುಕ್ತರು, ಬೆಂಗಳೂರು ಪೂರ್ವ ನಗರ ಪಾಲಿಕೆ, ಆರ್‌ಹೆಚ್‌ಬಿ (RHB) ಕಾಲೋನಿ, ಐಟಿಪಿಎಲ್ ಮುಖ್ಯರಸ್ತೆ, ಫಿನಿಕ್ಸ್ ಮಾಲ್ ಎದುರು, ಬೆಂಗಳೂರು – 560048.
SSC Recruitment 2026: ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ