ಕೃಷಿ ಇಲಾಖೆ ಭರ್ಜರಿ ನೇಮಕಾತಿ 2026; ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | Agriculture Department Recruitment 2026 For AO and AAO

ಕೃಷಿ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಮಾಡಲು ಇಚ್ಛಿಸುವ ಯುವಕರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ.

ಕರ್ನಾಟಕ ರಾಜ್ಯದ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್-ಬಿ (Group-B) ವೃಂದದ ಪ್ರತಿಷ್ಠಿತ ಅಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಉಳಿಕೆ ಮೂಲ ವೃಂದ (RPC) ಹಾಗೂ ಕಲ್ಯಾಣ ಕರ್ನಾಟಕ (KK) ವೃಂದದಡಿ ಖಾಲಿ ಇರುವ ಬರೋಬ್ಬರಿ 890 ‘ಕೃಷಿ ಅಧಿಕಾರಿ’ ಹಾಗೂ ‘ಸಹಾಯಕ ಕೃಷಿ ಅಧಿಕಾರಿ’ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುತ್ತಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕವಾದ ಮೇ 10, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಪರೀಕ್ಷಾ ವಿಧಾನ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) – ಕೃಷಿ ಇಲಾಖೆ
  • ವೇತನ ಶ್ರೇಣಿ: 65,950 ರೂ. – 1,34,200 ರೂ.
  • ಹುದ್ದೆಗಳ ಸಂಖ್ಯೆ: 890 ಹುದ್ದೆಗಳು (RPC- 632 ಮತ್ತು HK- 258)
  • ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಗಳ ವಿವರ:

  • ಕೃಷಿ ಅಧಿಕಾರಿ (Agriculture Officer): 121 ಹುದ್ದೆಗಳು (RPC- 81 ಹಾಗೂ KK- 40 ಹುದ್ದೆಗಳು).
  • ಸಹಾಯಕ ಕೃಷಿ ಅಧಿಕಾರಿ (Asst. Agriculture Officer): 769 ಹುದ್ದೆಗಳು (RPC- 551 ಹಾಗೂ KK- 218 ಹುದ್ದೆಗಳು).

ಶೈಕ್ಷಣಿಕ ಅರ್ಹತೆ:

  • ಶೇ. 85 ರಷ್ಟು ಹುದ್ದೆಗಳಿಗೆ: ಬಿ.ಎಸ್ಸಿ (ಕೃಷಿ) / ಬಿ.ಎಸ್ಸಿ (ಆನರ್ಸ್) ಕೃಷಿ ಪದವಿ ಪೂರ್ಣಗೊಳಿಸಿರಬೇಕು.
  • ಶೇ. 15 ರಷ್ಟು ಹುದ್ದೆಗಳಿಗೆ: ಬಿ.ಟೆಕ್ (ಆಹಾರ ವಿಜ್ಞಾನ/ತಂತ್ರಜ್ಞಾನ), ಬಿ.ಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ), ಬಿ.ಎಸ್ಸಿ (ಕೃಷಿ ಜೈವಿಕ ತಂತ್ರಜ್ಞಾನ), ಬಿ.ಟೆಕ್ (ಅಗ್ರಿಕಲ್ಚರಲ್ ಇಂಜಿನಿಯರಿಂಗ್) ಮುಂತಾದ ತತ್ಸಮಾನ ಪದವಿ ಪಡೆದಿರಬೇಕು.

ವೇತನ ಶ್ರೇಣಿ ಹಾಗೂ ಸೇವಾ ನಿಯಮ:

  • ಕೃಷಿ ಅಧಿಕಾರಿ: ಮಾಸಿಕ 69,250 ರೂ. ನಿಂದ 1,34,200 ರೂ. ವರೆಗೆ.
  • ಸಹಾಯಕ ಕೃಷಿ ಅಧಿಕಾರಿ: ಮಾಸಿಕ 65,950 ರೂ. ನಿಂದ 1,24,900 ರೂ. ವರೆಗೆ. (ಆಯ್ಕೆಯಾದ ಅಭ್ಯರ್ಥಿಗಳು 2 ವರ್ಷ ಖಾಯಂಪೂರ್ವ (ಪ್ರೊಬೇಷನರಿ) ಅವಧಿಯಲ್ಲಿರುತ್ತಾರೆ ಹಾಗೂ ಇವರಿಗೆ NPS ಪಿಂಚಣಿ ಸೌಲಭ್ಯ ಅನ್ವಯವಾಗುತ್ತದೆ).

ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ಸರ್ಕಾರದ ಆದೇಶದನ್ವಯ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದ್ದು, ಈ ಕೆಳಗಿನಂತಿರುತ್ತದೆ:

  • ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷಗಳು.
  • ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: ಗರಿಷ್ಠ 43 ವರ್ಷಗಳು.
  • ಪರಿಶಿಷ್ಟ ಜಾತಿ (SC) / ಪರಿಶಿಷ್ಟ ಪಂಗಡ (ST) / ಪ್ರವರ್ಗ-1 ರ ಅಭ್ಯರ್ಥಿಗಳಿಗೆ: ಗರಿಷ್ಠ 45 ವರ್ಷಗಳು.

ಆಯ್ಕೆ ಪ್ರಕ್ರಿಯೆ ಹಾಗೂ ಪರೀಕ್ಷಾ ವಿಧಾನ: ಆಫ್‌ಲೈನ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

  • ನೆಗೆಟಿವ್ ಮಾರ್ಕಿಂಗ್: ಪ್ರತಿಯೊಂದು ತಪ್ಪು ಉತ್ತರಕ್ಕೆ 0.75 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಹಾಗೆಯೇ, ಯಾವುದೇ ಪ್ರಶ್ನೆಗೆ ಉತ್ತರಿಸದೇ ಬಿಟ್ಟರೂ 0.75 ಅಂಕ ಕಡಿತವಾಗುತ್ತದೆ (ಇದನ್ನು ತಪ್ಪಿಸಲು ಉತ್ತರಿಸದ ಪ್ರಶ್ನೆಗಳಿಗೆ OMR ನಲ್ಲಿರುವ 5ನೇ ವೃತ್ತವನ್ನು ಕಡ್ಡಾಯವಾಗಿ ಶೇಡ್ ಮಾಡಬೇಕು).
  • ಕಡ್ಡಾಯ ಕನ್ನಡ ಪರೀಕ್ಷೆ: ಎಸ್.ಎಸ್.ಎಲ್.ಸಿ ಹಂತದಲ್ಲಿ ಕನ್ನಡ ಓದಿಲ್ಲದ ಅಭ್ಯರ್ಥಿಗಳು ಕಡ್ಡಾಯವಾಗಿ 150 ಅಂಕಗಳ ಕನ್ನಡ ಭಾಷಾ ಪರೀಕ್ಷೆ ಬರೆದು ಕನಿಷ್ಠ 50 ಅಂಕ ಪಡೆಯಲೇಬೇಕು.

ಅರ್ಜಿ ಶುಲ್ಕ:

  • ಸಾಮಾನ್ಯ ಅರ್ಹತೆ ಹಾಗೂ ಒಬಿಸಿ (2A/2B/3A/3B) ಅಭ್ಯರ್ಥಿಗಳಿಗೆ: ರೂ. 750/-.
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 / ಮಾಜಿ ಸೈನಿಕ / ತೃತೀಯ ಲಿಂಗಿ ಅಭ್ಯರ್ಥಿಗಳಿಗೆ: ರೂ. 500/-.
  • ವಿಶೇಷ ಚೇತನ (PwD) ಅಭ್ಯರ್ಥಿಗಳಿಗೆ: ರೂ. 250/-.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19-04-2026
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-05-2026
  • ಪರೀಕ್ಷಾ ದಿನಾಂಕಗಳು: ಜೂನ್ 06 ರಂದು ಕನ್ನಡ ಭಾಷಾ ಪರೀಕ್ಷೆ. ಜೂನ್ 07 ರಂದು (ಉಳಿಕೆ ಮೂಲ ವೃಂದ ಹುದ್ದೆಗಳಿಗೆ) ಹಾಗೂ ಜೂನ್ 14 ರಂದು (ಕಲ್ಯಾಣ ಕರ್ನಾಟಕ ಹುದ್ದೆಗಳಿಗೆ) ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.

ಪ್ರಮುಖ ಲಿಂಕ್‌ಗಳು:

KEA Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್:

ಹೈಕೋರ್ಟ್‌ ನೇಮಕಾತಿ 2026, ಅರ್ಜಿ ಆಹ್ವಾನ

SSC Recruitment 2026: ವಿವಿಧ ಹುದ್ದೆಗಳ ನೇಮಕಾತಿಗಾಗಿ SSC ಅರ್ಜಿ ಆಹ್ವಾನ

Leave a Comment