Gold Price: ನಾಳೆ ಅಕ್ಷಯ ತೃತೀಯ: ಹಬ್ಬದ ಹೊಸ್ತಿಲಲ್ಲಿ ಚಿನ್ನದ ಬೆಲೆ ಏರಿಕೆ; ಎಷ್ಟು ಹೆಚ್ಚಳವಾಗಿದೆ ನೋಡಿ

ನಾಳೆಯೇ (ಏಪ್ರಿಲ್ 19) ಪವಿತ್ರ ‘ಅಕ್ಷಯ ತೃತೀಯ’ ಹಬ್ಬ. ಈ ಶುಭ ಸಂದರ್ಭದಲ್ಲಿ ಸ್ವಲ್ಪವಾದರೂ ಚಿನ್ನ ಖರೀದಿಸಬೇಕು ಎಂದುಕೊಂಡಿದ್ದ ಆಭರಣ ಪ್ರಿಯರಿಗೆ ಮಾರುಕಟ್ಟೆಯಿಂದ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ನಿನ್ನೆ (ಶುಕ್ರವಾರ) ಕೊಂಚ ಇಳಿಕೆಯಾಗಿ ನಿಟ್ಟುಸಿರು ಬಿಡುವಂತೆ ಮಾಡಿದ್ದ ಬಂಗಾರದ ಬೆಲೆ, ಶನಿವಾರ (ಏಪ್ರಿಲ್ 18) ದಿಢೀರ್ ಏರಿಕೆ ಕಂಡಿದೆ.

ಮಾರುಕಟ್ಟೆಯಲ್ಲಿ ಇಂದು 22 ಕ್ಯಾರೆಟ್ ಆಭರಣ ಚಿನ್ನದ ದರ ಪ್ರತಿ 1 ಗ್ರಾಂಗೆ 75 ರೂಪಾಯಿ ಏರಿಕೆಯಾಗಿದ್ದು, 10 ಗ್ರಾಂಗೆ 750 ರೂಪಾಯಿ ಹೆಚ್ಚಳವಾಗಿದೆ. ಈ ಏರಿಕೆಯೊಂದಿಗೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಒಟ್ಟು ಬೆಲೆ 1,42,800 ರೂಪಾಯಿಗೆ ತಲುಪಿದೆ.

ಇದೇ ರೀತಿ, ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲೂ 1 ಗ್ರಾಂಗೆ 81 ರೂಪಾಯಿ ಏರಿಕೆಯಾಗಿದ್ದು, 10 ಗ್ರಾಂ ಬೆಲೆ 1,55,780 ರೂಪಾಯಿಗೆ ಮುಟ್ಟಿದೆ.

ಇನ್ನು ಹಗುರವಾದ ಒಡವೆಗಳಿಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ 1 ಗ್ರಾಂಗೆ 61 ರೂಪಾಯಿ ಹೆಚ್ಚಳ ಕಂಡು, 10 ಗ್ರಾಂಗೆ 1,16,840 ರೂಪಾಯಿಗೆ ಮಾರಾಟವಾಗುತ್ತಿದೆ.

ಅಕ್ಷಯ ತೃತೀಯ 2026: ಚಿನ್ನ ಖರೀದಿಸಲು ಶುಭ ಮುಹೂರ್ತ ಹಿಂದೂ ಪಂಚಾಂಗದ ಪ್ರಕಾರ, ಈ ವರ್ಷದ ಅಕ್ಷಯ ತೃತೀಯವನ್ನು ಏಪ್ರಿಲ್ 19, 2026 (ಭಾನುವಾರ) ರಂದು ಆಚರಿಸಲಾಗುತ್ತಿದೆ. ಈ ದಿನ ಖರೀದಿಸಿದ ಸಂಪತ್ತು ಎಂದೆಂದಿಗೂ ‘ಅಕ್ಷಯ’ವಾಗಿ ಬೆಳೆಯುತ್ತದೆ ಎಂಬುದು ನಂಬಿಕೆ.

22 ಕ್ಯಾರೆಟ್: ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ 10 ಗ್ರಾಂಗೆ ₹750 ಹೆಚ್ಚಳವಾಗಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹14,280 ▲ ₹75 ಏರಿಕೆ
8 ಗ್ರಾಂ ₹1,14,240 ▲ ₹600 ಏರಿಕೆ
10 ಗ್ರಾಂ ₹1,42,800 ▲ ₹750 ಏರಿಕೆ

24 ಕ್ಯಾರೆಟ್: ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಇಂದು ಪ್ರತಿ 10 ಗ್ರಾಂ ಮೇಲೆ ₹810 ಏರಿಕೆಯಾಗಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹15,578 ▲ ₹81 ಏರಿಕೆ
8 ಗ್ರಾಂ ₹1,24,624 ▲ ₹648 ಏರಿಕೆ
10 ಗ್ರಾಂ ₹1,55,780 ▲ ₹810 ಏರಿಕೆ

18 ಕ್ಯಾರೆಟ್: ಹಗುರವಾದ ಒಡವೆಗಳ ತಯಾರಿಕೆಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಪ್ರತಿ 10 ಗ್ರಾಂಗೆ ₹610 ಏರಿಕೆ ಕಂಡಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹11,684 ▲ ₹61 ಏರಿಕೆ
10 ಗ್ರಾಂ ₹1,16,840 ▲ ₹610 ಏರಿಕೆ

ಹೈಕೋರ್ಟ್‌ ನೇಮಕಾತಿ 2026, ಅರ್ಜಿ ಆಹ್ವಾನ

SSC Recruitment 2026: ವಿವಿಧ ಹುದ್ದೆಗಳ ನೇಮಕಾತಿಗಾಗಿ SSC ಅರ್ಜಿ ಆಹ್ವಾನ

Leave a Comment