ಹೈಕೋರ್ಟ್‌ ನೇಮಕಾತಿ 2026, ಅರ್ಜಿ ಆಹ್ವಾನ | Karnataka High Court Recruitment 2026 Apply Online

ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ಉನ್ನತ ಹುದ್ದೆಯ ಕನಸು ಕಾಣುತ್ತಿರುವ ಯುವಕರಿಗೆ ಮಾಡುತ್ತಿರುವವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಭರ್ಜರಿ ಸಿಹಿಸುದ್ದಿ ನೀಡಿದೆ.

ನ್ಯಾಯಾಂಗ ಇಲಾಖೆಯಲ್ಲಿ ಖಾಲಿ ಇರುವ ಬರೋಬ್ಬರಿ 90 ಪ್ರತಿಷ್ಠಿತ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ (ನೇರ ನೇಮಕಾತಿ) ಮೂಲಕ ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.

ಈ ಅಧಿಸೂಚನೆಯ ಪ್ರಕಾರ, ಕಡ್ಡಾಯವಾಗಿ ಎಲ್‌ಎಲ್‌ಬಿ (LLB) ಮುಗಿಸಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವವರು ‘ಸಿವಿಲ್ ನ್ಯಾಯಾಧೀಶರ’ (Civil Judges) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು 90 ಹುದ್ದೆಗಳಲ್ಲಿ 15 ಹೊಸ ಹುದ್ದೆಗಳಾದರೆ, ಉಳಿದ 75 ಬ್ಯಾಕ್‌ಲಾಗ್ (ಉಳಿಕೆ) ಹುದ್ದೆಗಳಾಗಿವೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕವಾದ ಮೇ 15, 2026 ರೊಳಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದೆ.

ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

High Court Recruitment 2026 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಕರ್ನಾಟಕ ಉಚ್ಚ ನ್ಯಾಯಾಲಯ (Karnataka High Court)
  • ವೇತನ ಶ್ರೇಣಿ: 77,840 ರೂ. – 1,36,520 ರೂ.
  • ಹುದ್ದೆಗಳ ಸಂಖ್ಯೆ: 90
  • ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಗಳ ವಿವರ: ಸಿವಿಲ್ ನ್ಯಾಯಾಧೀಶರು (Civil Judges)
ಒಟ್ಟು 90 ಹುದ್ದೆಗಳು. (ಇದರಲ್ಲಿ 15 ಹೊಸ ಹುದ್ದೆಗಳು ಮತ್ತು 75 ಬ್ಯಾಕ್‌ಲಾಗ್ ಹುದ್ದೆಗಳು ಸೇರಿವೆ).

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಕಾನೂನು ಪದವಿಯನ್ನು (Degree in Law) ಪೂರ್ಣಗೊಳಿಸಿರಬೇಕು ಹಾಗೂ ವಕೀಲರಾಗಿ ನೋಂದಾಯಿಸಿಕೊಂಡಿರಬೇಕು.

ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 77,840 ರೂ. ನಿಂದ 1,36,520 ರೂ. ವರೆಗೆ ನಿಗದಿತ ವೇತನ ಹಾಗೂ ಸರ್ಕಾರದ ನಿಯಮಾವಳಿಗಳ ಅನ್ವಯ ಇತರ ಭತ್ಯೆಗಳು ಲಭ್ಯವಿರುತ್ತವೆ.

ವಯೋಮಿತಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕಡೆಯ ದಿನಾಂಕಕ್ಕೆ (15-05-2026) ಅನ್ವಯವಾಗುವಂತೆ ಅಭ್ಯರ್ಥಿಗಳಿಗೆ ಈ ಕೆಳಗಿನ ವಯೋಮಿತಿ ನಿಗದಿಪಡಿಸಲಾಗಿದೆ:

  • ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ: ಗರಿಷ್ಠ 35 ವರ್ಷ ಮೀರಿರಬಾರದು.
  • ವಯೋಮಿತಿ ಸಡಿಲಿಕೆ: ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಇತರೆ ಹಿಂದುಳಿದ ವರ್ಗಗಳ (OBC – 2A, 2B, 3A, 3B) ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷಗಳವರೆಗೆ ಅವಕಾಶವಿದೆ.
  • ಮಾಜಿ ಸೈನಿಕರಿಗೆ: ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸಿದ ವರ್ಷಗಳ ಜೊತೆಗೆ ಹೆಚ್ಚುವರಿ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
  • ಸೂಚನೆ:- ಸರ್ಕಾರಿ ಆದೇಶ ಸಂಖ್ಯೆ. ಸಿಆಸುಇ 262 ಸೆನೆನಿ 2025 ದಿನಾಂಕ 29-01-2026 ರ ಪ್ರಕಾರ ವಯೋಮಿತಿ 5 ವರ್ಷ ಸಡಿಲಿಕೆಯನ್ನು ಒದಗಿಸಲಾಗಿದೆ.

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗ ಹಾಗೂ ಒಬಿಸಿ (2A/2B/3A/3B) ಅಭ್ಯರ್ಥಿಗಳಿಗೆ: 1000 ರೂ.
  • ಪ.ಜಾ / ಪ.ಪಂ / ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: 500 ರೂ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16-04-2026
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-05-2026

ಪ್ರಮುಖ ಲಿಂಕ್‌ಗಳು:

FDA, SDA ಹುದ್ದೆಗಳ ನೇಮಕಾತಿ 2026: ಆನ್‌ಲೈನ್‌ ಅರ್ಜಿ ಆಹ್ವಾನ

SSC Recruitment 2026: ವಿವಿಧ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನ

Leave a Comment