ಇಂದಿನ ಚಿನ್ನದ ಬೆಲೆ (ಮಾ.31): ಬಂಗಾರದ ಬೆಲೆ ಭಾರಿ ಏರಿಕೆ; ಎಷ್ಟು ಏರಿಕೆಯಾಗಿದೆ ನೋಡಿ

ಚಿನ್ನದ ಬೆಲೆ ಇಳಿಯಬಹುದು, ಒಡವೆ ಮಾಡಿಸಿಕೊಳ್ಳೋಣ ಎಂದು ಕಾಯುತ್ತಿದ್ದ ಗ್ರಾಹಕರಿಗೆ ದೊಡ್ಡ ಶಾಕ್. ನಿನ್ನೆಯಷ್ಟೇ ಅಲ್ಪ ಏರಿಕೆ ಕಂಡು ನಿರಾಸೆ ಮೂಡಿಸಿದ್ದ ಚಿನ್ನದ ಬೆಲೆ, ಮಂಗಳವಾರ (ಮಾರ್ಚ್ 31, 2026) ಮತ್ತೆ ಭಾರಿ ಏರಿಕೆ ಕಂಡಿದೆ.

ತಿಂಗಳ ಕೊನೆಯ ದಿನವಾದ ಇಂದು ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಬಂಗಾರದ ಬೆಲೆಯಲ್ಲಿ ಏರಿಕೆ ದಾಖಲಾಗಿದೆ. ಹಾಗಾದರೆ, ಇಂದಿನ ಈ ಭಾರಿ ಏರಿಕೆಯ ಬಳಿಕ ಮಾರುಕಟ್ಟೆಯಲ್ಲಿ ದರ ಎಷ್ಟಿದೆ? ನಿನ್ನೆಗಿಂತ ಎಷ್ಟು ದುಬಾರಿಯಾಗಿದೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ:

ಇಂದಿನ ಚಿನ್ನದ ಬೆಲೆ – 31-03-2026:

22 ಕ್ಯಾರೆಟ್: ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ 10 ಗ್ರಾಂಗೆ ₹950 ಏರಿಕೆಯಾಗಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹13,685 ▲ ₹95 ಏರಿಕೆ
8 ಗ್ರಾಂ ₹1,09,480 ▲ ₹760 ಏರಿಕೆ
10 ಗ್ರಾಂ ₹1,36,850 ▲ ₹950 ಏರಿಕೆ

24 ಕ್ಯಾರೆಟ್: ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಇಂದು ಪ್ರತಿ 10 ಗ್ರಾಂ ಮೇಲೆ ₹1,030 ಹೆಚ್ಚಳವಾಗಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹14,929 ▲ ₹103 ಏರಿಕೆ
8 ಗ್ರಾಂ ₹1,19,432 ▲ ₹824 ಏರಿಕೆ
10 ಗ್ರಾಂ ₹1,49,290 ▲ ₹1,030 ಏರಿಕೆ

18 ಕ್ಯಾರೆಟ್: ಹಗುರವಾದ ಒಡವೆಗಳ ತಯಾರಿಕೆಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಪ್ರತಿ 10 ಗ್ರಾಂಗೆ ₹780 ಏರಿಕೆ ಕಂಡಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹11,197 ▲ ₹78 ಏರಿಕೆ
10 ಗ್ರಾಂ ₹1,11,970 ▲ ₹780 ಏರಿಕೆ

ಕಳೆದೆರಡು ದಿನಗಳಿಂದ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಸತತವಾಗಿ ಏರುತ್ತಲೇ ಇದೆ. ಸೋಮವಾರ (ಮಾರ್ಚ್ 30) 1 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಮೇಲೆ ₹15 ಏರಿಕೆಯಾಗಿತ್ತು. ಆದರೆ ಇಂದು (ಮಾರ್ಚ್ 31) ಅದೇ 1 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ ₹95 ರಷ್ಟು ಹೆಚ್ಚಳವಾಗಿದೆ. ಕೇವಲ ಎರಡೇ ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಒಟ್ಟು ₹1,100 ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ರಾಜ್ಯದಲ್ಲಿ ಇಂದಿನಿಂದ ಏಪ್ರಿಲ್ 3 ರವರೆಗೆ ಗುಡುಗು ಸಹಿತ ಮಳೆ

Leave a Comment