ಚಿನ್ನದ ಬೆಲೆ ಏರಿಳಿತ; ಇಂದಿನ ಬಂಗಾರದ ದರ ಎಷ್ಟಿದೆ ನೋಡಿ

ವಾರದ ಮೊದಲ ದಿನ ಸೋಮವಾರ (ಮಾರ್ಚ್ 30, 2026) ಚಿನ್ನದ ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಕಂಡುಬಂದಿದ್ದು, ಗ್ರಾಹಕರು ಗೊಂದಲಕ್ಕೀಡಾಗಿದ್ದಾರೆ.

ಬೆಳಿಗ್ಗೆ ವಹಿವಾಟು ಆರಂಭವಾದಾಗ ಚಿನ್ನದ ದರದಲ್ಲಿ ತುಸು ಇಳಿಕೆಯಾಗಿ ಬಂಗಾರದ ಅಂಗಡಿಗೆ ಹೋಗುವ ಗ್ರಾಹಕರಿಗೆ ಸಣ್ಣ ರಿಲೀಫ್ ಸಿಕ್ಕಿತ್ತು. ಆದರೆ, ಈ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. ಇದೀಗ ಮಾರುಕಟ್ಟೆಯಲ್ಲಿ ಬೆಲೆ ಮತ್ತೆ ಏರುಗತಿ ಹಿಡಿದಿದೆ.

ಬೆಳಿಗ್ಗೆ ಪ್ರತಿ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹13,500 ಕ್ಕೆ ಇಳಿದಿತ್ತು. ಆದರೆ ಈಗಿನ ಹೊಸ ಅಪ್‌ಡೇಟ್ ಪ್ರಕಾರ, ದರ ಮತ್ತೆ ₹13,590 ಕ್ಕೆ ಜಿಗಿದಿದೆ. ಹಾಗಾದರೆ, ಈ ಹೊಸ ಬದಲಾವಣೆಯ ಬಳಿಕ ಮಾರುಕಟ್ಟೆಯಲ್ಲಿ ನಿಖರವಾದ ದರ ಎಷ್ಟಿದೆ? ನಿನ್ನೆಗಿಂತ ಎಷ್ಟು ಹೆಚ್ಚಳವಾಗಿದೆ? ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ:

ಇಂದಿನ ಚಿನ್ನದ ಬೆಲೆ 30-03-2026:

22 ಕ್ಯಾರೆಟ್: ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ 10 ಗ್ರಾಂಗೆ ₹750 ಇಳಿಕೆಯಾಗಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹13,590 ▲ ₹15 ಏರಿಕೆ
8 ಗ್ರಾಂ ₹1,08,720 ▲ ₹120 ಏರಿಕೆ
10 ಗ್ರಾಂ ₹1,35,900 ▲ ₹150 ಏರಿಕೆ

24 ಕ್ಯಾರೆಟ್: ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಇಂದು ಪ್ರತಿ 10 ಗ್ರಾಂ ಮೇಲೆ ₹810 ಕಡಿಮೆಯಾಗಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹14,826 ▲ ₹17 ಏರಿಕೆ
8 ಗ್ರಾಂ ₹1,18,608 ▲ ₹136 ಏರಿಕೆ
10 ಗ್ರಾಂ ₹1,48,260 ▲ ₹170 ಏರಿಕೆ

18 ಕ್ಯಾರೆಟ್: ಹಗುರವಾದ ಒಡವೆಗಳ ತಯಾರಿಕೆಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಪ್ರತಿ 10 ಗ್ರಾಂಗೆ ₹610 ಇಳಿಕೆ ಕಂಡಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹11,119 ▲ ₹12 ಏರಿಕೆ
10 ಗ್ರಾಂ ₹1,11,190 ▲ ₹120 ಏರಿಕೆ

ಒಂದೇ ದಿನದಲ್ಲಿ ಮಾರುಕಟ್ಟೆ ಎರಡು ರೀತಿಯಲ್ಲಿ ಬದಲಾಗಿದೆ. ಬೆಳಿಗ್ಗೆ ಇಳಿಕೆಯಾಗಿ ಗ್ರಾಹಕರಿಗೆ ಖುಷಿ ನೀಡಿದ್ದ ಚಿನ್ನ, ಮಧ್ಯಾಹ್ನದ ಹೊತ್ತಿಗೆ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ನಿನ್ನೆಗೆ ಹೋಲಿಸಿದರೆ 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಮೇಲೆ ಒಟ್ಟು ₹150 ರಷ್ಟು ಹೆಚ್ಚಳವಾಗಿದೆ. ಈ ತೀವ್ರ ಏರಿಳಿತಗಳು ಬಂಗಾರ ಖರೀದಿಸಲು ಕಾಯುತ್ತಿರುವವರ ಲೆಕ್ಕಾಚಾರವನ್ನು ತಲೆಕೆಳಗಾಗಿಸುತ್ತಿವೆ.

ರಾಜ್ಯದಲ್ಲಿ ಇಂದಿನಿಂದ ಏಪ್ರಿಲ್ 3 ರವರೆಗೆ ಗುಡುಗು ಸಹಿತ ಮಳೆ

Leave a Comment