ಚಿನ್ನದ ದರ ಸತತವಾಗಿ ಏರುತ್ತಲೇ ಇರುತ್ತದೆ ಎಂದು ಕಂಗಾಲಾಗಿದ್ದ ಆಭರಣ ಪ್ರಿಯರಿಗೆ ವಾರಾಂತ್ಯದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಹಳದಿ ಲೋಹದ ಬೆಲೆ ಸತತವಾಗಿ ಕೆಳಮುಖವಾಗಿ ಚಲಿಸಿದ್ದು, ಗ್ರಾಹಕರಿಗೆ ಹಾಗೂ ಹೂಡಿಕೆದಾರರಿಗೆ ದೊಡ್ಡ ಮಟ್ಟದ ಉಳಿತಾಯವಾಗುತ್ತಿದೆ.
ಗುರುವಾರ (ಏಪ್ರಿಲ್ 23) ಪಾತಾಳಕ್ಕಿಳಿದಿದ್ದ ಬಂಗಾರದ ಬೆಲೆಯಲ್ಲಿ ಶುಕ್ರವಾರವೂ (ಏಪ್ರಿಲ್ 24) ಇಳಿಕೆಯ ಟ್ರೆಂಡ್ ಮುಂದುವರಿದಿದೆ. ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆಯಲ್ಲಿ ಇಂದು 55 ರೂಪಾಯಿ ಕಡಿತಗೊಂಡಿದ್ದು, 14,020 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಮೂಲಕ 10 ಗ್ರಾಂ ಚಿನ್ನದ ಖರೀದಿಯ ಮೇಲೆ ಗ್ರಾಹಕರಿಗೆ ನೇರವಾಗಿ 550 ರೂಪಾಯಿ ಕಡಿಮೆಯಾದಂತಾಗಿದೆ.
ಶುದ್ಧ ಚಿನ್ನದ ದರದಲ್ಲೂ ಈ ಕುಸಿತದ ಲಾಭ ಗ್ರಾಹಕರಿಗೆ ಸಿಗುತ್ತಿದೆ. ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಚಿನ್ನದ ದರದಲ್ಲಿ 1 ಗ್ರಾಂಗೆ 60 ರೂಪಾಯಿ ಕುಸಿದಿದ್ದು, 15,295 ರೂಪಾಯಿಗೆ ತಲುಪಿದೆ. ಅಂದರೆ 10 ಗ್ರಾಂ ಶುದ್ಧ ಚಿನ್ನ ಖರೀದಿಸಿದರೆ 600 ರೂಪಾಯಿ ಉಳಿತಾಯವಾಗಲಿದೆ.
ಇನ್ನು ಹಗುರವಾದ ಆಭರಣಗಳಿಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ ಪ್ರತಿ ಗ್ರಾಂಗೆ 45 ರೂಪಾಯಿ ಕಡಿಮೆಯಾಗಿ 11,471 ರೂಪಾಯಿಗೆ ವಹಿವಾಟು ನಡೆಸುತ್ತಿದೆ.
Today Gold Rate: 24-04-2026
22 ಕ್ಯಾರೆಟ್: ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ 10 ಗ್ರಾಂಗೆ ₹550 ಇಳಿಕೆಯಾಗಿದೆ.
| ತೂಕ | ಇಂದಿನ ಬೆಲೆ | ಬೆಲೆ ವ್ಯತ್ಯಾಸ |
|---|---|---|
| 1 ಗ್ರಾಂ | ₹14,020 | ▼ ₹55 ಇಳಿಕೆ |
| 8 ಗ್ರಾಂ | ₹1,12,160 | ▼ ₹440 ಇಳಿಕೆ |
| 10 ಗ್ರಾಂ | ₹1,40,200 | ▼ ₹550 ಇಳಿಕೆ |
24 ಕ್ಯಾರೆಟ್: ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಇಂದು ಪ್ರತಿ 10 ಗ್ರಾಂ ಮೇಲೆ ₹600 ಇಳಿಕೆಯಾಗಿದೆ.
| ತೂಕ | ಇಂದಿನ ಬೆಲೆ | ಬೆಲೆ ವ್ಯತ್ಯಾಸ |
|---|---|---|
| 1 ಗ್ರಾಂ | ₹15,295 | ▼ ₹60 ಇಳಿಕೆ |
| 8 ಗ್ರಾಂ | ₹1,22,360 | ▼ ₹480 ಇಳಿಕೆ |
| 10 ಗ್ರಾಂ | ₹1,52,950 | ▼ ₹600 ಇಳಿಕೆ |
18 ಕ್ಯಾರೆಟ್: ಹಗುರವಾದ ಒಡವೆಗಳ ತಯಾರಿಕೆಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಪ್ರತಿ 10 ಗ್ರಾಂಗೆ ₹450 ಇಳಿಕೆ ಕಂಡಿದೆ.
| ತೂಕ | ಇಂದಿನ ಬೆಲೆ | ಬೆಲೆ ವ್ಯತ್ಯಾಸ |
|---|---|---|
| 1 ಗ್ರಾಂ | ₹11,471 | ▼ ₹45 ಇಳಿಕೆ |
| 10 ಗ್ರಾಂ | ₹1,14,710 | ▼ ₹450 ಇಳಿಕೆ |
(ಸೂಚನೆ: ಮಾರುಕಟ್ಟೆಯ ಈ ದರಗಳಿಗೆ ಶೇಕಡಾ 3ರಷ್ಟು ಜಿಎಸ್‌ಟಿ ಹಾಗೂ ಆಭರಣ ಮಳಿಗೆಗಳ ತಯಾರಿಕಾ ವೆಚ್ಚ (ಮೇಕಿಂಗ್ ಚಾರ್ಜಸ್) ಸೇರಿರುವುದಿಲ್ಲ. ಹೀಗಾಗಿ ಅಂತಿಮ ಬಿಲ್‌ನಲ್ಲಿ ಕೊಂಚ ವ್ಯತ್ಯಾಸವಿರುತ್ತದೆ).
ಕೃಷಿ ಇಲಾಖೆ ಭರ್ಜರಿ ನೇಮಕಾತಿ 2026; ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ