SSC Recruitment 2026: 12ನೇ ತರಗತಿ ಪಾಸ್ ಆದವರಿಗೆ ಉದ್ಯೋಗವಕಾಶ; ಆನ್‌ಲೈನ್ ಅರ್ಜಿ ಆಹ್ವಾನ

12ನೇ ತರಗತಿ ಪಾಸ್ ಆಗಿ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಉದ್ಯೋಗ ಪಡೆಯಬೇಕು ಎಂದು ಕನಸು ಕಾಣುತ್ತಿರುವ ಯುವಜನತೆಗೆ ಇಲ್ಲಿದೆ ಭರ್ಜರಿ ಅವಕಾಶ.

ಸಿಬ್ಬಂದಿ ಆಯ್ಕೆ ಆಯೋಗವು (SSC) 2026ನೇ ಸಾಲಿನ ಸ್ಟೆನೋಗ್ರಾಫರ್ (ಗ್ರೇಡ್ ಸಿ ಮತ್ತು ಡಿ) ನೇಮಕಾತಿಗೆ ಅಧಿಕೃತ ಅಧಿಸೂಚನೆ (SSC Recruitment 2026) ಹೊರಡಿಸಿದೆ. ಬರೋಬ್ಬರಿ 731 ಹುದ್ದೆಗಳು ಖಾಲಿ ಇದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

SSC Recruitment 2026 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಸಿಬ್ಬಂದಿ ಆಯ್ಕೆ ಆಯೋಗ (SSC)
  • ಹುದ್ದೆಗಳ ಸಂಖ್ಯೆ: ಅಂದಾಜು 731 ಹುದ್ದೆಗಳು
  • ಉದ್ಯೋಗ ಸ್ಥಳ: All India

ಹುದ್ದೆಗಳ ವಿವರ:

  • ಸ್ಟೆನೋಗ್ರಾಫರ್ ಗ್ರೇಡ್ ‘ಸಿ’
  • ಸ್ಟೆನೋಗ್ರಾಫರ್ ಗ್ರೇಡ್ ‘ಡಿ’

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ 12ನೇ ತರಗತಿ (ಪಿಯುಸಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಆಗಸ್ಟ್ 01, 2026 ರೊಳಗೆ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ ಪೂರೈಸಿರಬೇಕಾಗುತ್ತದೆ.

ವೇತನ ಶ್ರೇಣಿ: ಎಸ್‌ಎಸ್‌ಸಿ ನಿಯಮಗಳ ಪ್ರಕಾರ

ವಯೋಮಿತಿ:

  • ಸ್ಟೆನೋಗ್ರಾಫರ್ ಗ್ರೇಡ್ ‘ಸಿ’: ಕನಿಷ್ಠ 18 ವರ್ಷದಿಂದ ಗರಿಷ್ಠ 30 ವರ್ಷ
  • ಸ್ಟೆನೋಗ್ರಾಫರ್ ಗ್ರೇಡ್ ‘ಡಿ’: ಕನಿಷ್ಠ 18 ವರ್ಷದಿಂದ ಗರಿಷ್ಠ 27 ವರ್ಷ
  • ವಯೋಮಿತಿಯಲ್ಲಿ ಮೀಸಲಾತಿ ಸಡಿಲಿಕೆ: ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನರಿಗೆ 10 ರಿಂದ 15 ವರ್ಷಗಳ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ ಮತ್ತು ಒಬಿಸಿ ಪುರುಷ ಅಭ್ಯರ್ಥಿಗಳಿಗೆ: ರೂ. 100/-
  • ಎಲ್ಲಾ ವರ್ಗದ ಮಹಿಳೆಯರು, ಎಸ್‌ಸಿ, ಎಸ್‌ಟಿ, ವಿಕಲಚೇತನ (PwBD) ಹಾಗೂ ಮಾಜಿ ಸೈನಿಕ (ESM) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ (ಉಚಿತ) ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

  • ಹಂತ 1: ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (CBT)
  • ಹಂತ 2: ಕೌಶಲ್ಯ ಪರೀಕ್ಷೆ (ಸ್ಟೆನೋಗ್ರಫಿ ಸ್ಕಿಲ್ ಟೆಸ್ಟ್)
  • ಹಂತ 3: ದಾಖಲೆಗಳ ಪರಿಶೀಲನೆ (Document Verification) ಹಾಗೂ ವೈದ್ಯಕೀಯ ಪರೀಕ್ಷೆ (ಗಮನಿಸಿ: ಸಿಬಿಟಿ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ 0.25 ಅಂಕಗಳ ಋಣಾತ್ಮಕ (ನೆಗೆಟಿವ್) ಮಾರ್ಕಿಂಗ್ ಇರುತ್ತದೆ).

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24-04-2026
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-05-2026 (ರಾತ್ರಿ 11:00 ಗಂಟೆಯವರೆಗೆ ಮಾತ್ರ)
  • ಆನ್‌ಲೈನ್ ಶುಲ್ಕ ಪಾವತಿಸಲು ಕಡೆಯ ದಿನ: 16-05-2026 (ರಾತ್ರಿ 11:00 ಗಂಟೆ)
  • ಅರ್ಜಿ ತಿದ್ದುಪಡಿಗೆ ಅವಕಾಶ: 20-05-2026 ರಿಂದ 21-05-2026
  • ಕಂಪ್ಯೂಟರ್ ಆಧಾರಿತ ಪರೀಕ್ಷೆ: ಜುಲೈ-ಆಗಸ್ಟ್ 2026

ಪ್ರಮುಖ ಲಿಂಕ್‌ಗಳು:

ಕೃಷಿ ಇಲಾಖೆ ಭರ್ಜರಿ ನೇಮಕಾತಿ 2026

SSC Recruitment 2026: ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

Leave a Comment