Danta Bhagya Scheme: ರೇಷನ್‌ ಕಾರ್ಡ್‌ ಇದ್ದವರಿಗೆ ಉಚಿತ ದಂತ ಭಾಗ್ಯ ಯೋಜನೆ

ವಯಸ್ಸಾಗುತ್ತಿದ್ದಂತೆ ಕಾಡುವ ಅತಿದೊಡ್ಡ ಸಮಸ್ಯೆ ಎಂದರೆ ಹಲ್ಲುಗಳು ಬೀಳುವುದು ಮತ್ತು ದಂತಕ್ಷಯ. ಹಲ್ಲಿಲ್ಲದೆ ಇಷ್ಟವಾದ ಆಹಾರವನ್ನು ಅಗಿದು ತಿನ್ನಲಾಗದೆ, ಇತ್ತ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಸಾವಿರಾರು ರೂಪಾಯಿ ಕೊಟ್ಟು ಕೃತಕ ಹಲ್ಲು (Denture) ಹಾಕಿಸಿಕೊಳ್ಳಲಾಗದೆ ಎಷ್ಟೋ ಬಡ ವೃದ್ಧರು ಪರದಾಡುತ್ತಾರೆ.

ಬಡ ಮತ್ತು ಮಧ್ಯಮ ವರ್ಗದ ಹಿರಿಯರ ಸಂಕಟವನ್ನು ದೂರ ಮಾಡಲೆಂದೇ ರಾಜ್ಯ ಸರ್ಕಾರ ‘ದಂತ ಭಾಗ್ಯ’ (Danta Bhagya) ಎಂಬ ಅತ್ಯುತ್ತಮ ಯೋಜನೆಯನ್ನು ಜಾರಿಗೆ ತಂದಿದೆ. “ಹಿರಿಯರ ಮೊಗದಲ್ಲಿ ಮಂದಹಾಸ” ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಈ ಯೋಜನೆಯಡಿ, ಬಿಪಿಎಲ್ ಕಾರ್ಡ್‌ದಾರರಿಗೆ ಸಂಪೂರ್ಣ ಉಚಿತವಾಗಿ ದಂತ ಚಿಕಿತ್ಸೆ ಹಾಗೂ ಕೃತಕ ಹಲ್ಲುಗಳನ್ನು ಅಳವಡಿಸಲಾಗುತ್ತಿದೆ.

Danta Bhagya Scheme 2026 Eligibility:

ಹಾಗಾದರೆ, ಈ ಉಚಿತ ಸೇವೆ ಪಡೆಯಲು ಯಾರೆಲ್ಲಾ ಅರ್ಹರು? ಚಿಕಿತ್ಸೆ ಎಲ್ಲಿ ಸಿಗುತ್ತದೆ? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ:

ಯಾರಿಗೆ ಸಿಗಲಿದೆ ಈ ಉಚಿತ ಸೇವೆ?: ಈ ಯೋಜನೆಯ ಲಾಭ ಪಡೆಯಲು ಯಾವುದೇ ಕಠಿಣ ನಿಯಮಗಳಿಲ್ಲ, ಕೇವಲ ಎರಡು ಪ್ರಮುಖ ಅರ್ಹತೆಗಳಿದ್ದರೆ ಸಾಕು:

  • ವಯೋಮಿತಿ: ಸೇವೆ ಪಡೆಯುವವರ ವಯಸ್ಸು ಕಡ್ಡಾಯವಾಗಿ 45 ವರ್ಷ ಮೇಲ್ಪಟ್ಟಿರಬೇಕು.
  • ರೇಷನ್ ಕಾರ್ಡ್: ಅರ್ಜಿದಾರರ ಕುಟುಂಬವು ಕಡ್ಡಾಯವಾಗಿ ಬಡತನ ರೇಖೆಗಿಂತ ಕೆಳಗಿರುವ ಅಂದರೆ, ಬಿಪಿಎಲ್ (BPL) ಪಡಿತರ ಚೀಟಿಯನ್ನು ಹೊಂದಿರಬೇಕು.

ಎಲ್ಲಿ ಸಿಗುತ್ತೆ ಉಚಿತ ಚಿಕಿತ್ಸೆ?: ಹಲ್ಲು ಕೀಳಿಸುವುದು, ದಂತ ಪಂಕ್ತಿ (ಕೃತಕ ಹಲ್ಲು) ಅಳವಡಿಸುವುದು ಸೇರಿದಂತೆ ಹಲ್ಲಿನ ಯಾವುದೇ ಚಿಕಿತ್ಸೆಗಾಗಿ ಅರ್ಹ ಫಲಾನುಭವಿಗಳು ಈ ಕೆಳಗಿನ ಸ್ಥಳಗಳಿಗೆ ಭೇಟಿ ನೀಡಬಹುದು:

  1. ನಿಮ್ಮ ತಾಲೂಕು ಅಥವಾ ಹತ್ತಿರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ
  2. ರಾಜ್ಯಾದ್ಯಂತ ಸರ್ಕಾರ ಗುರುತಿಸಿರುವ 44 ದಂತ ವೈದ್ಯಕೀಯ ಕಾಲೇಜುಗಳಲ್ಲಿ

41 ಸಾವಿರಕ್ಕೂ ಹೆಚ್ಚು ಜನರಿಗೆ ಸಿಕ್ಕಿದೆ ‘ದಂತ ಭಾಗ್ಯ’: ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿ ಪ್ರಕಾರ, ಈವರೆಗೆ ರಾಜ್ಯದಲ್ಲಿ ಬರೋಬ್ಬರಿ 41,000 ಕ್ಕೂ ಹೆಚ್ಚು ಹಿರಿಯರು ಈ ಯೋಜನೆಯಡಿ ಉಚಿತವಾಗಿ ಕೃತಕ ಹಲ್ಲುಗಳನ್ನು ಹಾಕಿಸಿಕೊಂಡಿದ್ದಾರೆ. ಹಲ್ಲಿನ ಸಮಸ್ಯೆಯಿಂದ ನರಳುತ್ತಿದ್ದ ಸಾವಿರಾರು ವೃದ್ಧರು ಇಂದು ನೆಮ್ಮದಿಯಿಂದ ತಮಗಿಷ್ಟವಾದ ಆಹಾರವನ್ನು ಸೇವಿಸುತ್ತಿದ್ದಾರೆ.

ಹಲ್ಲಿನ ಚಿಕಿತ್ಸೆ ಇಂದು ಅತ್ಯಂತ ದುಬಾರಿಯಾಗಿದೆ. ಕೇವಲ ಒಂದು ಕೃತಕ ದಂತ ಪಂಕ್ತಿ ಅಳವಡಿಸಲು ಖಾಸಗಿ ಕ್ಲಿನಿಕ್‌ಗಳಲ್ಲಿ ಕನಿಷ್ಠ 15 ರಿಂದ 20 ಸಾವಿರ ರೂಪಾಯಿ ಖರ್ಚಾಗುತ್ತದೆ.

ಬಡವರಿಗೆ ಇದು ಕೈಗೆಟುಕದ ಮಾತು. ಹೀಗಾಗಿ ನಿಮ್ಮ ಮನೆಯಲ್ಲಿ ಅಥವಾ ಅಕ್ಕಪಕ್ಕದಲ್ಲಿ ಯಾರಾದರೂ ಬಿಪಿಎಲ್ ಕಾರ್ಡ್ ಇರುವ ಹಿರಿಯರಿದ್ದರೆ, ಅವರಿಗೆ ದಯವಿಟ್ಟು ‘ದಂತ ಭಾಗ್ಯ’ ಯೋಜನೆಯ ಬಗ್ಗೆ ತಿಳಿಸಿ. ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಉಚಿತ ಚಿಕಿತ್ಸೆ ಕೊಡಿಸಿ. ಇದು ನಿಜಕ್ಕೂ ಒಂದು ಪುಣ್ಯದ ಕೆಲಸ.

Karnataka Ration Card: ರೇಷನ್ ಕಾರ್ಡ್ ಪಟ್ಟಿಯಿಂದ 21.63 ಲಕ್ಷ ಫಲಾನುಭವಿಗಳು ಹೊರಗೆ?

Leave a Comment