Gold Rate: ಚಿನ್ನದ ಬೆಲೆ ಭಾರಿ ಏರಿಕೆ; ಒಂದೇ ದಿನ ಬರೋಬ್ಬರಿ 3,440 ರೂ. ಹೆಚ್ಚಳ

ಬೆಳಿಗ್ಗೆಯಷ್ಟೇ ಭಾರಿ ಏರಿಕೆ ಕಂಡು ಗ್ರಾಹಕರಿಗೆ ಶಾಕ್ ನೀಡಿದ್ದ ಚಿನ್ನದ ಬೆಲೆ, ಸಂಜೆಯಾಗುತ್ತಿದ್ದಂತೆ ಮತ್ತಷ್ಟು ಹೆಚ್ಚಳವಾಗಿದೆ. ಮದುವೆ ಸೀಸನ್‌ಗಾಗಿ ಒಡವೆ ಖರೀದಿಸಲು ಮಳಿಗೆಗೆ ಹೋದ ಗ್ರಾಹಕರಿಗೆ ಒಂದೇ ದಿನದಲ್ಲಿ ಎರಡು ಬಾರಿ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಬೆಳಿಗ್ಗೆ 1 ಗ್ರಾಂ 22 ಕ್ಯಾರೆಟ್ ಚಿನ್ನದ ಮೇಲೆ ₹180 ಏರಿಕೆಯಾಗಿತ್ತು (ದರ: ₹13,885). ಆದರೆ, ಸಂಜೆಯ ಹೊಸ ಅಪ್‌ಡೇಟ್ ಪ್ರಕಾರ ಈ ಏರಿಕೆಯ ಪ್ರಮಾಣ ಬರೋಬ್ಬರಿ ₹315 ಕ್ಕೆ ತಲುಪಿದ್ದು, 1 ಗ್ರಾಂ ಬೆಲೆ ₹14,000 ಗಡಿ ದಾಟಿದೆ!

ಹಾಗಾದರೆ, ಈ ಬೃಹತ್ ಏರಿಕೆಯ ಬಳಿಕ ಮಾರುಕಟ್ಟೆಯಲ್ಲಿ ಈಗಿನ ನಿಖರವಾದ ದರ ಎಷ್ಟಿದೆ? ನಿನ್ನೆಗಿಂತ ಒಟ್ಟು ಎಷ್ಟು ಹೆಚ್ಚಳವಾಗಿದೆ? ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ:

ಇಂದಿನ ಚಿನ್ನದ ಬೆಲೆ 01-04-2026:

22 ಕ್ಯಾರೆಟ್: ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ 10 ಗ್ರಾಂಗೆ ಬರೋಬ್ಬರಿ ₹3,150 ರಷ್ಟು ಭಾರಿ ಏರಿಕೆಯಾಗಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹14,020 ▲ ₹315 ಏರಿಕೆ
8 ಗ್ರಾಂ ₹1,12,160 ▲ ₹2,520 ಏರಿಕೆ
10 ಗ್ರಾಂ ₹1,40,200 ▲ ₹3,150 ಏರಿಕೆ

24 ಕ್ಯಾರೆಟ್: ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಇಂದು ಪ್ರತಿ 10 ಗ್ರಾಂ ಮೇಲೆ ₹3,440 ರಷ್ಟು ಬೃಹತ್ ಹೆಚ್ಚಳವಾಗಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹15,295 ▲ ₹344 ಏರಿಕೆ
8 ಗ್ರಾಂ ₹1,22,360 ▲ ₹2,752 ಏರಿಕೆ
10 ಗ್ರಾಂ ₹1,52,950 ▲ ₹3,440 ಏರಿಕೆ

18 ಕ್ಯಾರೆಟ್: ಹಗುರವಾದ ಒಡವೆಗಳ ತಯಾರಿಕೆಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಪ್ರತಿ 10 ಗ್ರಾಂಗೆ ₹2,580 ಏರಿಕೆ ಕಂಡಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹11,471 ▲ ₹258 ಏರಿಕೆ
10 ಗ್ರಾಂ ₹1,14,710 ▲ ₹2,580 ಏರಿಕೆ

ಚಿನ್ನದ ಮಾರುಕಟ್ಟೆಯಲ್ಲಿ ಇದೊಂದು ಅಚ್ಚರಿಯ ಬೆಳವಣಿಗೆ. ಬೆಳಿಗ್ಗೆ 22 ಕ್ಯಾರೆಟ್ ಚಿನ್ನದ ಬೆಲೆ ₹13,885 ಇತ್ತು, ಆದರೆ ಸಂಜೆಯ ಹೊತ್ತಿಗೆ ಅದು ₹14,020 ಕ್ಕೆ ಏರಿಕೆಯಾಗುವ ಮೂಲಕ 14 ಸಾವಿರದ ಗಡಿ ದಾಟಿದೆ. ಒಂದೇ ದಿನದಲ್ಲಿ 10 ಗ್ರಾಂ ಆಭರಣ ಚಿನ್ನದ ಮೇಲೆ ಬರೋಬ್ಬರಿ ಮೂರು ಸಾವಿರಕ್ಕೂ ಅಧಿಕ (₹3,150) ರೂಪಾಯಿ ಹೆಚ್ಚಳವಾಗಿರುವುದು ಗ್ರಾಹಕರ ಲೆಕ್ಕಾಚಾರವನ್ನು ಸಂಪೂರ್ಣವಾಗಿ ಬುಡಮೇಲು ಮಾಡಿದೆ.

Karnataka Ration Card: ರೇಷನ್ ಕಾರ್ಡ್ ಪಟ್ಟಿಯಿಂದ 21.63 ಲಕ್ಷ ಫಲಾನುಭವಿಗಳು ಹೊರಗೆ?

ದ್ವಿತೀಯ ಪಿಯುಸಿ ಫಲಿತಾಂಶ 2026 ಪ್ರಕಟಣೆ ದಿನಾಂಕ

Leave a Comment