ಚಿನ್ನದ ಬೆಲೆ ಮತ್ತೆ ಏರಿಕೆ; ಗ್ರಾಹಕರಿಗೆ ದರ ಏರಿಕೆ ಬರೆ, ಇಂದಿನ ಬಂಗಾರದ ಬೆಲೆ ಎಷ್ಟು?

ನಿನ್ನೆಯಷ್ಟೇ ಭಾರಿ ಇಳಿಕೆ ಕಂಡು ಆಭರಣ ಖರೀದಿದಾರರಿಗೆ ಬಿಗ್ ರಿಲೀಫ್ ನೀಡಿದ್ದ ಚಿನ್ನದ ಬೆಲೆ, ಇಂದು ಮತ್ತೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿನ ಈ ತೀವ್ರ ಏರಿಳಿತಗಳು ಮದುವೆ ಸೀಸನ್‌ಗಾಗಿ ಒಡವೆ ಮಾಡಿಸಲು ಪ್ಲಾನ್ ಮಾಡಿದ್ದ ಗ್ರಾಹಕರ ಲೆಕ್ಕಾಚಾರವನ್ನು ತಲೆಕೆಳಗಾಗಿಸುತ್ತಿವೆ.

ನಿನ್ನೆ ಸಂಜೆ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಬರೋಬ್ಬರಿ ₹365 ರಷ್ಟು ಕುಸಿದು ₹13,655 ಕ್ಕೆ ತಲುಪಿತ್ತು. ಆದರೆ, ಇಂದಿನ ವಹಿವಾಟು ಆರಂಭವಾಗುತ್ತಿದ್ದಂತೆಯೇ ಚಿನ್ನದ ದರದಲ್ಲಿ ಮತ್ತೆ ಏರಿಕೆ ದಾಖಲಾಗಿದೆ.

ಹಾಗಾದರೆ, ಇಂದಿನ ಈ ಹೆಚ್ಚಳದ ಬಳಿಕ ಬಣಗಾರದ ದರ ಎಷ್ಟಿದೆ? ನಿನ್ನೆಗಿಂತ ಎಷ್ಟು ದುಬಾರಿಯಾಗಿದೆ? ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ:

ಇಂದಿನ ಚಿನ್ನದ ಬೆಲೆ 03-04-2026:

22 ಕ್ಯಾರೆಟ್: ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ 10 ಗ್ರಾಂಗೆ ₹1,800 ರೂಗಳರಷ್ಟು ಏರಿಕೆಯಾಗಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹13,835 ▲ ₹180 ಏರಿಕೆ
8 ಗ್ರಾಂ ₹1,10,680 ▲ ₹1,440 ಏರಿಕೆ
10 ಗ್ರಾಂ ₹1,38,350 ▲ ₹1,800 ಏರಿಕೆ

24 ಕ್ಯಾರೆಟ್: ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಇಂದು ಪ್ರತಿ 10 ಗ್ರಾಂ ಮೇಲೆ ₹1,960 ರೂಗಳರಷ್ಟು ಹೆಚ್ಚಳವಾಗಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹15,093 ▲ ₹196 ಏರಿಕೆ
8 ಗ್ರಾಂ ₹1,20,744 ▲ ₹1,568 ಏರಿಕೆ
10 ಗ್ರಾಂ ₹1,50,930 ▲ ₹1,960 ಏರಿಕೆ

18 ಕ್ಯಾರೆಟ್: ಹಗುರವಾದ ಒಡವೆಗಳ ತಯಾರಿಕೆಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಪ್ರತಿ 10 ಗ್ರಾಂಗೆ ₹1,470 ರೂಗಳರಷ್ಟು ಏರಿಕೆ ಕಂಡಿದೆ.

ತೂಕ ಇಂದಿನ ಬೆಲೆ ಬೆಲೆ ವ್ಯತ್ಯಾಸ
1 ಗ್ರಾಂ ₹11,320 ▲ ₹147 ಏರಿಕೆ
10 ಗ್ರಾಂ ₹1,13,200 ▲ ₹1,470 ಏರಿಕೆ

ಚಿನ್ನದ ಮಾರುಕಟ್ಟೆ ಸದ್ಯ ತೀವ್ರ ಅಸ್ಥಿರತೆಯಿಂದ ಕೂಡಿದೆ. ನಿನ್ನೆ ಒಂದೇ ದಿನದಲ್ಲಿ 1 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ ₹365 ರಷ್ಟು ಕುಸಿತ ಕಂಡು ಗ್ರಾಹಕರಿಗೆ ಖುಷಿ ನೀಡಿತ್ತು. ಆದರೆ, ಆ ಖುಷಿ ಕೇವಲ 24 ಗಂಟೆಗಳ ಕಾಲವೂ ಉಳಿದಿಲ್ಲಾ. ಇಂದು ಮತ್ತೆ 1 ಗ್ರಾಂ 22 ಕ್ಯಾರೆಟ್ ಚಿನ್ನದ ಮೇಲೆ ₹180 ಏರಿಕೆಯಾಗಿದ್ದು, ಮಾರುಕಟ್ಟೆ ಮತ್ತೆ ದುಬಾರಿಯಾಗಿದೆ.

ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ₹60,000 ಉಚಿತ ಸಹಾಯಧನ

Danta Bhagya Scheme: ರೇಷನ್‌ ಕಾರ್ಡ್‌ ಇದ್ದವರಿಗೆ ಉಚಿತ ದಂತ ಭಾಗ್ಯ ಯೋಜನೆ

Leave a Comment