ಬೆಂಗಳೂರಿನ ಪ್ರತಿಷ್ಠಿತ ‘ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ’ಯು (IGICH) ತನ್ನಲ್ಲಿ ಖಾಲಿ ಇರುವ ವಿವಿಧ ವಿಭಾಗಗಳ ಒಟ್ಟು 75 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಮೇ 08 ರೊಳಗೆ ಸಲ್ಲಿಸಬೇಕಿದೆ.
ಗ್ರೂಪ್-ಎ ವೃಂದದ ವೈದ್ಯಾಧಿಕಾರಿಗಳು (ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಮಾಲೋಚಕರು ಇತ್ಯಾದಿ) ಹಾಗೂ ಗ್ರೂಪ್-ಸಿ ವೃಂದದ ಶುಶ್ರೂಷಕಾಧಿಕಾರಿ ಹುದ್ದೆಗಳು ಇದರಲ್ಲಿ ಸೇರಿವೆ. ವೈದ್ಯಕೀಯ ಹುದ್ದೆಗಳಿಗೆ 75 ಸಾವಿರ ರೂ. ಗಳಿಂದ ಗರಿಷ್ಠ 2.5 ಲಕ್ಷ ರೂ. ವರೆಗೆ ಆಕರ್ಷಕ ವೇತನ ನಿಗದಿಪಡಿಸಲಾಗಿದೆ.
ಈ ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು 11 ತಿಂಗಳ ಅವಧಿಗೆ ಅಥವಾ ಕಾಯಂ ನೇಮಕಾತಿ ಆಗುವವರೆಗೆ ನೇಮಿಸಿಕೊಳ್ಳಲಾಗುತ್ತದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಬೆಂಗಳೂರು (IGICH)
- ವೇತನ ಶ್ರೇಣಿ: 33,350 ರೂ. – 2,50,000 ರೂ.
- ಹುದ್ದೆಗಳ ಸಂಖ್ಯೆ: 75 (ಗ್ರೂಪ್ ಎ- 25 ಹಾಗೂ ಗ್ರೂಪ್ ಸಿ- 50)
- ಉದ್ಯೋಗ ಸ್ಥಳ: ಬೆಂಗಳೂರು
IGICH Recruitment 2026 ಹುದ್ದೆಗಳ ವಿವರ:
- ಗ್ರೂಪ್-ಎ ಹುದ್ದೆಗಳು (ಒಟ್ಟು 25):
- ಸಹ ಪ್ರಾಧ್ಯಾಪಕರು (01)
- ವಿವಿಧ ವಿಭಾಗಗಳಲ್ಲಿ ಸಹಾಯಕ ಪ್ರಾಧ್ಯಾಪಕರು (17)
- ಬ್ಲಡ್ ಸೆಂಟರ್ ಆಫೀಸರ್ (01)
- ಸಮಾಲೋಚಕರು (02)
- ಸ್ಪೆಷಲಿಸ್ಟ್ (01)
- ಸೀನಿಯರ್ ರೆಸಿಡೆಂಟ್ (03)
- ಗ್ರೂಪ್-ಸಿ ಹುದ್ದೆಗಳು (ಒಟ್ಟು 50):
- ಶುಶ್ರೂಷಕಾಧಿಕಾರಿಗಳು (Nursing Officers).
ಶೈಕ್ಷಣಿಕ ಅರ್ಹತೆ:
- ಗ್ರೂಪ್-ಎ (ವೈದ್ಯಕೀಯ ಹುದ್ದೆಗಳು): ಆಯಾ ವಿಷಯಗಳಿಗೆ ಅನುಗುಣವಾಗಿ ಎನ್‌ಎಂಸಿ (NMC) ನಿಯಮಾವಳಿಗಳ ಪ್ರಕಾರ ನಿಗದಿತ ವೈದ್ಯಕೀಯ ಅರ್ಹತೆ ಹೊಂದಿರಬೇಕು.
- ಗ್ರೂಪ್-ಸಿ (ನರ್ಸಿಂಗ್ ಹುದ್ದೆಗಳು): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ನರ್ಸಿಂಗ್ (B.Sc. Nursing) ಪದವಿ ಪಡೆದಿರಬೇಕು ಹಾಗೂ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಸಿರಬೇಕು. ಮಕ್ಕಳ ನರ್ಸಿಂಗ್ (Paediatric Nursing) ನಲ್ಲಿ ತರಬೇತಿ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ವೇತನ ಶ್ರೇಣಿ:
- ಗ್ರೂಪ್-ಎ ವೈದ್ಯಕೀಯ ಹುದ್ದೆಗಳಿಗೆ: ಮಾಸಿಕ ರೂ. 75,000 ದಿಂದ ಗರಿಷ್ಠ ರೂ. 2,50,000 ದವರೆಗೆ (ಹುದ್ದೆಗನುಸಾರವಾಗಿ).
- ಗ್ರೂಪ್-ಸಿ ಶುಶ್ರೂಷಕಾಧಿಕಾರಿ ಹುದ್ದೆಗಳಿಗೆ: ಮಾಸಿಕ ರೂ. 33,350/- ನಿಗದಿಪಡಿಸಲಾಗಿದೆ.
ವಯೋಮಿತಿ:
- ಗ್ರೂಪ್-ಎ: ಸಹ ಪ್ರಾಧ್ಯಾಪಕರಿಗೆ 46 ರಿಂದ 53 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಸಹಾಯಕ ಪ್ರಾಧ್ಯಾಪಕರು ಹಾಗೂ ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ 43 ರಿಂದ 48 ವರ್ಷ. ಸಮಾಲೋಚಕ (Consultant) ಹುದ್ದೆಗಳಿಗೆ ಗರಿಷ್ಠ 60 ವರ್ಷ ವಯೋಮಿತಿ ಇದೆ.
- ಗ್ರೂಪ್-ಸಿ: ಸಾಮಾನ್ಯ ವರ್ಗಕ್ಕೆ 40 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 45 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
- ಅರ್ಜಿ ಡೌನ್‌ಲೋಡ್: ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು (Application Form) ಡೌನ್‌ಲೋಡ್ ಮಾಡಿಕೊಳ್ಳಬೇಕು.
- ಅರ್ಜಿ ಭರ್ತಿ: ಡೌನ್‌ಲೋಡ್ ಮಾಡಿದ ಅರ್ಜಿಯ ಪ್ರಿಂಟ್ ತೆಗೆದುಕೊಂಡು, ಅದರಲ್ಲಿ ಕೇಳಲಾಗಿರುವ ಎಲ್ಲಾ ಅಗತ್ಯ ಮಾಹಿತಿಯನ್ನು ಯಾವುದೇ ತಪ್ಪುಗಳಿಲ್ಲದಂತೆ ಭರ್ತಿ ಮಾಡಬೇಕು.
- ಅರ್ಜಿ ಸಲ್ಲಿಕೆ: ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯ ಜೊತೆಗೆ ನಿಗದಿತ ಅರ್ಜಿ ಶುಲ್ಕ ಹಾಗೂ ಅಗತ್ಯ ವಿದ್ಯಾರ್ಹತೆ, ವಯೋಮಿತಿ ಮತ್ತು ಅನುಭವದ ದೃಢೀಕೃತ ದಾಖಲೆಗಳನ್ನು ಲಗತ್ತಿಸಿ, ಮೇ 08, 2026 ರ ಸಂಜೆ 5.30 ರೊಳಗೆ ಸಂಸ್ಥೆಯ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪುವಂತೆ ಸಲ್ಲಿಸಬೇಕು.
- ಹೆಚ್ಚಿನ ಮಾಹಿತಿಯನ್ನು ಸಂಸ್ಥೆಯ ಕಛೇರಿ ಸಮಯ ಪೂರ್ವಾಹ್ನ 10.30 ರಿಂದ ಅಪರಾಹ್ನ 5.30 ರವರೆಗೆ ಅಥವಾ ಸಂಸ್ಥೆಯ ಇ-ಮೇಲ್ ವಿಳಾಸ ihealthchild@yahoo.in ಇಲ್ಲಿ ಸಂಪರ್ಕಿಸಬಹುದು.
ಅರ್ಜಿ ಶುಲ್ಕ:
- ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ: ರೂ. 2,000/-.
- ಒಬಿಸಿ (OBC) ವರ್ಗದ ಅಭ್ಯರ್ಥಿಗಳಿಗೆ: ರೂ. 1,500/-.
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ: ರೂ. 500/-.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18-04-2026
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 08-05-2026 ರ ಸಂಜೆ 5.30 ರೊಳಗೆ
ಪ್ರಮುಖ ಲಿಂಕ್‌ಗಳು:
- ಅಧಿಸೂಚನೆ ಕನ್ನಡ: ಡೌನ್‌ಲೋಡ್
- ಅಧಿಸೂಚನೆ English: ಡೌನ್‌ಲೋಡ್
- ಅಧಿಕೃತ ವೆಬ್ಸೈಟ್: http://igich.karnataka.gov.in