ಮದುವೆ ಸೀಸನ್ನಲ್ಲಿ ಚಿನ್ನ ಖರೀದಿಸಲು ಪ್ಲಾನ್ ಮಾಡುತ್ತಿರುವ ಗ್ರಾಹಕರಿಗೆ ಸತತ ಎರಡು ಮೂರು ದಿನಗಳಿಂದ ಚಿನ್ನದ ಬೆಲೆ ಇಳಿಯುತ್ತಿದೆ. ಎರಡು ದಿನ ಕೊಂಚ ಇಳಿಕೆ ಕಂಡಿದ್ದ ಹಳದಿ ಲೋಹದ ಬೆಲೆಯಲ್ಲಿ ಗುರುವಾರ (ಏಪ್ರಿಲ್ 23) ಭಾರಿ ಕುಸಿತ ಕಂಡುಬಂದಿದೆ.
ಇಂದು ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ದರದಲ್ಲಿ ಪ್ರತಿ 1 ಗ್ರಾಂಗೆ ಬರೋಬ್ಬರಿ 110 ರೂಪಾಯಿ ಇಳಿಕೆಯಾಗಿದ್ದು, ಬೆಲೆ 14,075 ರೂಪಾಯಿಗೆ ತಂದು ನಿಂತಿದೆ. ಈ ಮೂಲಕ ಕೇವಲ ಒಂದೇ ದಿನದಲ್ಲಿ 10 ಗ್ರಾಂ ಆಭರಣ ಚಿನ್ನದ ಬೆಲೆ 1,100 ರೂಪಾಯಿ ಕಡಿಮೆಯಾದಂತಾಗಿದೆ.
ಅದೇ ರೀತಿ, ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲೂ ದೊಡ್ಡ ಮಟ್ಟದ ಕುಸಿತ ದಾಖಲಾಗಿದೆ. ಪ್ರತಿ 1 ಗ್ರಾಂ ಮೇಲೆ 120 ರೂಪಾಯಿ ಇಳಿಕೆಯಾಗಿದ್ದು, 15,355 ರೂಪಾಯಿಗೆ ಮಾರಾಟವಾಗುತ್ತಿದೆ.
ಅಂದರೆ 10 ಗ್ರಾಂ ಶುದ್ಧ ಚಿನ್ನದ ಬೆಲೆಯಲ್ಲಿ 1,200 ರೂಪಾಯಿ ಇಳಿಕೆ ಕಂಡಿದೆ. ಇನ್ನು ಹಗುರವಾದ ಒಡವೆಗಳಿಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ 1 ಗ್ರಾಂಗೆ 90 ರೂಪಾಯಿ ಕುಸಿದು 11,516 ರೂಪಾಯಿಗೆ ತಲುಪಿದೆ.
Today Gold Price: 23-04-2026
22 ಕ್ಯಾರೆಟ್: ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ 10 ಗ್ರಾಂಗೆ ಬರೋಬ್ಬರಿ ₹1,100 ಇಳಿಕೆಯಾಗಿದೆ.
| ತೂಕ | ಇಂದಿನ ಬೆಲೆ | ಬೆಲೆ ವ್ಯತ್ಯಾಸ |
|---|---|---|
| 1 ಗ್ರಾಂ | ₹14,075 | ▼ ₹110 ಇಳಿಕೆ |
| 8 ಗ್ರಾಂ | ₹1,12,600 | ▼ ₹880 ಇಳಿಕೆ |
| 10 ಗ್ರಾಂ | ₹1,40,750 | ▼ ₹1,100 ಇಳಿಕೆ |
24 ಕ್ಯಾರೆಟ್: ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಇಂದು ಪ್ರತಿ 10 ಗ್ರಾಂ ಮೇಲೆ ಬರೋಬ್ಬರಿ ₹1,200 ಇಳಿಕೆಯಾಗಿದೆ.
| ತೂಕ | ಇಂದಿನ ಬೆಲೆ | ಬೆಲೆ ವ್ಯತ್ಯಾಸ |
|---|---|---|
| 1 ಗ್ರಾಂ | ₹15,355 | ▼ ₹120 ಇಳಿಕೆ |
| 8 ಗ್ರಾಂ | ₹1,22,840 | ▼ ₹960 ಇಳಿಕೆ |
| 10 ಗ್ರಾಂ | ₹1,53,550 | ▼ ₹1,200 ಇಳಿಕೆ |
18 ಕ್ಯಾರೆಟ್: ಹಗುರವಾದ ಒಡವೆಗಳ ತಯಾರಿಕೆಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಪ್ರತಿ 10 ಗ್ರಾಂಗೆ ₹900 ಇಳಿಕೆ ಕಂಡಿದೆ.
| ತೂಕ | ಇಂದಿನ ಬೆಲೆ | ಬೆಲೆ ವ್ಯತ್ಯಾಸ |
|---|---|---|
| 1 ಗ್ರಾಂ | ₹11,516 | ▼ ₹90 ಇಳಿಕೆ |
| 10 ಗ್ರಾಂ | ₹1,15,160 | ▼ ₹900 ಇಳಿಕೆ |
(ಸೂಚನೆ: ಮಾರುಕಟ್ಟೆಯ ಈ ದರಗಳಿಗೆ ಶೇಕಡಾ 3ರಷ್ಟು ಜಿಎಸ್ಟಿ ಹಾಗೂ ಆಭರಣ ಮಳಿಗೆಗಳ ತಯಾರಿಕಾ ವೆಚ್ಚ (ಮೇಕಿಂಗ್ ಚಾರ್ಜಸ್) ಸೇರಿರುವುದಿಲ್ಲ. ಹೀಗಾಗಿ ಅಂತಿಮ ಬಿಲ್ನಲ್ಲಿ ಕೊಂಚ ವ್ಯತ್ಯಾಸವಿರುತ್ತದೆ).