ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ತಮ್ಮ ಫಲಿತಾಂಶಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ರಾಜ್ಯದ ಲಕ್ಷಾಂತರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಕಾತುರಕ್ಕೆ ಕೊನೆಗೂ ತೆರೆಬಿದ್ದಿದೆ.
ಇಂದು (ಗುರುವಾರ, ಏಪ್ರಿಲ್ 23 ರಂದು) 2026 ನೇ ಸಾಲಿನ ಪರೀಕ್ಷೆ-1ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಅಧಿಕೃತವಾಗಿ ಪ್ರಕಟಿಸಿದೆ.
ಶಿಕ್ಷಣ ಇಲಾಖೆಯು ನೇರವಾಗಿ ಪೋಷಕರ ಮೊಬೈಲ್ ನಂಬರ್‌ಗೆ ಎಸ್‌ಎಂಎಸ್ ಹಾಗೂ ವಾಟ್ಸಾಪ್ ಮೂಲಕ ರಿಸಲ್ಟ್ ಕಳುಹಿಸುವ ವ್ಯವಸ್ಥೆ ಮಾಡಿದೆ. ರಿಸಲ್ಟ್ ಬಂದ ನಂತರ ನಿಮ್ಮ ಒರಿಜಿನಲ್ ಅಂಕಪಟ್ಟಿಯನ್ನು ಸರ್ಕಾರದ ‘ಡಿಜಿಲಾಕರ್’ (DigiLocker) ಆ್ಯಪ್‌ನಲ್ಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಎಸ್‌ಎಸ್‌ಎಲ್‌ಸಿ ರಿಸಲ್ಟ್ ಚೆಕ್ ಮಾಡೋದು ಹೇಗೆ?
- ನಿಮ್ಮ ಮೊಬೈಲ್‌ನಲ್ಲಿ ನೇರವಾಗಿ
- karresults.nic.in ಅಥವಾ kseab.karnataka.gov.in ವೆಬ್‌ಸೈಟ್ ಓಪನ್ ಮಾಡಿ.
- ಮುಖಪುಟದಲ್ಲಿಯೇ ‘SSLC Examination-1 Result 2026’ ಎಂಬ ಲಿಂಕ್ ಕಾಣಿಸುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿ,
- ನಿಮ್ಮ ರಿಜಿಸ್ಟರ್ ನಂಬರ್ ಹಾಗೂ Date of Birth ನಮೂದಿಸಿ
- ‘Submit’ ಬಟನ್ ಕ್ಲಿಕ್ ಮಾಡಿ,
- ನಿಮ್ಮ ಫಲಿತಾಂಶ ಸ್ಕ್ರೀನ್ ಮೇಲೆ ಬರುತ್ತದೆ.
ಒಂದು ಸಣ್ಣ ಕಿವಿಮಾತು; ಮಧ್ಯಾಹ್ನ 12 ರ ಸುಮಾರಿಗೆ ಏಕಕಾಲಕ್ಕೆ ಲಕ್ಷಾಂತರ ಮಂದಿ ವೆಬ್‌ಸೈಟ್‌ಗೆ ನುಗ್ಗುವುದರಿಂದ ಸರ್ವರ್ ಡೌನ್ ಆಗುವ ಸಾಧ್ಯತೆ ಇರುತ್ತದೆ. ಪೇಜ್ ಲೋಡ್ ಆಗದಿದ್ದರೆ ಗಾಬರಿಯಾಗಬೇಡಿ, 10-15 ನಿಮಿಷ ಬಿಟ್ಟು ಮತ್ತೆ ಟ್ರೈ ಮಾಡಿ.
ಹಾಗೆಯೇ, ಪೋಷಕರು ಕೂಡ ಅಷ್ಟೇ, ಮಕ್ಕಳಿಗೆ ನಿರೀಕ್ಷಿತ ಅಂಕ ಬರದಿದ್ದರೆ ಅಥವಾ ಯಾವುದಾದರೂ ವಿಷಯದಲ್ಲಿ ಫೇಲ್ ಆದರೆ ಬೈಯಲು ಹೋಗಬೇಡಿ. ಈ ಬಾರಿ ಪರೀಕ್ಷೆ-2 ಮತ್ತು 3 ಬರೆದು ಮತ್ತೆ ಅಂಕ ಹೆಚ್ಚಿಸಿಕೊಳ್ಳಲು ಬೋರ್ಡ್ ಒಳ್ಳೆಯ ಅವಕಾಶ ಕೊಟ್ಟಿದೆ. ಇದೊಂದು ಕೇವಲ ಪರೀಕ್ಷೆಯಷ್ಟೇ ಹೊರತು ಜೀವನದ ಅಂತ್ಯವಲ್ಲ, ನೆನಪಿರಲಿ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ ಆಲ್ ದಿ ಬೆಸ್ಟ್!
SSC Recruitment 2026: ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ