12th Result Karnataka 2026: ದ್ವಿತೀಯ ಪಿಯುಸಿ ರಿಸಲ್ಟ್‌ ಹೊಸ ದಿನಾಂಕ ನಿಗದಿ; ಯಾವಾಗ ಫಲಿತಾಂಶ, ಹೇಗೆ ಚೆಕ್‌ ಮಾಡುವುದು?

ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಎದೆಬಡಿತ ಹೆಚ್ಚಾಗಿದೆ. ಇಂದು ಏಪ್ರಿಲ್ 7 ರಂದು ಫಲಿತಾಂಶ ಪ್ರಕಟವಗುತ್ತದೆ ಎಂಬ ಲೆಕ್ಕಾಚಾರ ತಲೆಕೆಳಗಾಗಿದ್ದು, ಇದೀಗ ಹೊಸ ದಿನಾಂಕದ ಬಗ್ಗೆ ಶಿಕ್ಷಣ ಇಲಾಖೆಯ ವಲಯದಲ್ಲಿ ಭಾರೀ ಚರ್ಚೆ ಶುರುವಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಫಲಿತಾಂಶ ಪ್ರಕಟಣೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಆದರೆ, ತಾಂತ್ರಿಕ ಹಾಗೂ ಆಡಳಿತಾತ್ಮಕ ಅಡೆತಡೆಗಳಿಂದಾಗಿ ನಿರೀಕ್ಷಿತ ದಿನದಂದು ರಿಸಲ್ಟ್ ಘೋಷಣೆಯಾಗಿಲ್ಲ.

12th Result Karnataka 2026 ಹೊಸ ಮಾಹಿತಿ:

ಈ ಅನಿಶ್ಚಿತತೆಯ ನಡುವೆ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಮೂಲಗಳಿಂದ ಇದೀಗ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ಮಂಡಳಿಯು ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಬಹುತೇಕ ಏಪ್ರಿಲ್ 9 ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ದಟ್ಟವಾಗಿದೆ.

ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆದಿದ್ದ ಈ ವರ್ಷದ ಪರೀಕ್ಷೆಗೆ ಬರೋಬ್ಬರಿ 7,10,363 ವಿದ್ಯಾರ್ಥಿಗಳು ಹಾಜರಾಗಿದ್ದರು. ಚುನಾವಣಾ ಆಯೋಗದಿಂದ ಗ್ರೀನ್ ಸಿಗ್ನಲ್ ಸಿಕ್ಕರೆ, ಏಪ್ರಿಲ್ 9 ರಂದು ಈ 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಕಾಯುವಿಕೆಗೆ ತೆರೆಬೀಳಲಿದೆ ಎನ್ನಲಾಗಿದೆ.

ಫಲಿತಾಂಶ ವಿಳಂಬಕ್ಕೆ ಅಸಲಿ ಕಾರಣವೇನು?

ಮಂಡಳಿಯು ಎಲ್ಲವನ್ನು ಸಿದ್ಧಪಡಿಸಿಕೊಂಡಿದ್ದರೂ, ರಿಸಲ್ಟ್ ಘೋಷಣೆಗೆ ಮುಖ್ಯವಾಗಿ ಅಡ್ಡಿಯಾಗಿರುವುದು ‘ಚುನಾವಣಾ ನೀತಿ ಸಂಹಿತೆ’.

ಸದ್ಯ ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಏಪ್ರಿಲ್ 9 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ.

ಶಿಕ್ಷಣ ಸಚಿವರು ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಬೇಕಿರುವುದರಿಂದ, ಚುನಾವಣಾ ಆಯೋಗದ ವಿಶೇಷ ಅನುಮತಿ ಪಡೆಯುವುದು ಕಡ್ಡಾಯ. ಈ ಅನುಮತಿ ಪ್ರಕ್ರಿಯೆಯಲ್ಲಿನ ವಿಳಂಬವೇ ಫಲಿತಾಂಶ ಮುಂದೂಡಿಕೆಗೆ ಪ್ರಮುಖ ಕಾರಣವಾಗಿದೆ.

ಆನ್‌ಲೈನ್‌ನಲ್ಲಿ ರಿಸಲ್ಟ್ ಚೆಕ್ ಮಾಡುವುದು ಹೇಗೆ?

ಮಂಡಳಿಯು ದಿನಾಂಕ ಹಾಗೂ ಸಮಯವನ್ನು ಅಂತಿಮಗೊಳಿಸಿ ಅಧಿಕೃತ ಪ್ರಕಟಣೆ ಹೊರಡಿಸಿದ ತಕ್ಷಣ, ವಿದ್ಯಾರ್ಥಿಗಳು ಆನ್‌ಲೈನ್ ಮೂಲಕವೇ ತಮ್ಮ ಅಂಕಗಳನ್ನು ನೋಡಬಹುದು.

  • ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ ‘II PUC EXAM-1 RESULT 2026ʼ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು Subject Combination ನಮೂದಿಸಿ ನಿಮ್ಮ ಫಲಿತಾಂಶ ಪಡೆಯಬಹುದು.

ಇದೇ ರೀತಿ Karnataka 2nd PUC Result 2026 News ಪಡೆಯಲು ನಮ್ಮ WhatsApp Group ಗೆ Join ಆಗಿ.

ವಿದ್ಯಾರ್ಥಿಗಳೇ, ಅಧಿಕಾರಿಗಳ ಮಾಹಿತಿಯಂತೆ ಏಪ್ರಿಲ್ 9 ರಂದು ಫಲಿತಾಂಶ ಬರುವ ಸಾಧ್ಯತೆ ಹೆಚ್ಚಿದೆ. ಅಲ್ಲಿಯವರೆಗೂ ಯಾವುದೇ ಆಧಾರವಿಲ್ಲದ ವದಂತಿಗಳಿಗೆ ಅಥವಾ ಸುಳ್ಳು ಲಿಂಕ್‌ಗಳಿಗೆ ಕಿವಿಗೊಡಬೇಡಿ. ಇಲಾಖೆಯ ಅಧಿಕೃತ ಪ್ರಕಟಣೆ ಬರುವವರೆಗೂ ತಾಳ್ಮೆಯಿಂದಿರಿ.

FDA, SDA ಹುದ್ದೆಗಳ ನೇಮಕಾತಿ 2026: ಆನ್‌ಲೈನ್‌ ಅರ್ಜಿ ಆಹ್ವಾನ

‘ಗೃಹಲಕ್ಷ್ಮಿ’ ಯೋಜನೆಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ

Leave a Comment