ರಾಜ್ಯದ 8.30 ಲಕ್ಷಕ್ಕೂ ಹೆಚ್ಚು ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳು ಹಾಗೂ ಪೋಷಕರ ಎದೆಯಲ್ಲಿ ಢವಢವ ಶುರುವಾಗಿದೆ. ಫಲಿತಾಂಶದ ನಿರೀಕ್ಷೆಯಲ್ಲಿ ದಿನಗಣನೆ ಮಾಡುತ್ತಿದ್ದವರಿಗೆ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದ್ದು, ತೃತೀಯ ಭಾಷೆ ಹಿಂದಿಗೆ ‘ಗ್ರೇಡ್’ ಬದಲು ‘ಅಂಕ’ಗಳನ್ನೇ ನೀಡುವಂತೆ ಸ್ಪಷ್ಟಪಡಿಸಿದೆ. ಇದರಿಂದಾಗಿ ಫಲಿತಾಂಶ ಕೊಂಚ ವಿಳಂಬವಾಗಲಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ.
ಸರ್ಕಾರಕ್ಕೆ ಹೈಕೋರ್ಟ್ ತರಾಟೆ ಹಿಂದಿ ಭಾಷೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದನ್ನು ತಪ್ಪಿಸಲು ಮತ್ತು ಅವರ ಮೇಲಿನ ಒತ್ತಡ ಕಡಿಮೆ ಮಾಡಲು, ಪ್ರಸಕ್ತ ಸಾಲಿನಿಂದ (2025-26) ಹಿಂದಿ ವಿಷಯಕ್ಕೆ ಅಂಕಗಳ ಬದಲು ‘ಶ್ರೇಣಿ’ (Grades) ನೀಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.
ಆದರೆ, ಈ ನಿರ್ಧಾರವನ್ನು ತಳ್ಳಿಹಾಕಿರುವ ಹೈಕೋರ್ಟ್, ಪರೀಕ್ಷಾ ಅಧಿಸೂಚನೆ ಹೊರಡಿಸುವ ಮುನ್ನವೇ ನಿಯಮ ರೂಪಿಸಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದೆ. “ಎಲ್ಲರನ್ನೂ ಪಾಸ್ ಮಾಡುವುದೇ ನಿಮ್ಮ ಉದ್ದೇಶವಾಗಿದ್ದರೆ, ಪರೀಕ್ಷೆ ಮಾಡುವುದು ಯಾಕೆ? ಪರೀಕ್ಷೆಯನ್ನೇ ರದ್ದು ಮಾಡಿ” ಎಂದು ಕಟುವಾಗಿ ನುಡಿದಿರುವ ನ್ಯಾಯಾಲಯ, ಈ ವರ್ಷ ಅಂಕಗಳನ್ನೇ ನೀಡುವಂತೆ ಸೂಚಿಸಿ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿದೆ.
ಫಲಿತಾಂಶ ವಿಳಂಬವಿಲ್ಲ ಎಂದ ಶಿಕ್ಷಣ ಸಚಿವರು ಹೈಕೋರ್ಟ್ ಆದೇಶದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, “ನ್ಯಾಯಾಲಯದ ಆದೇಶದಿಂದ ಫಲಿತಾಂಶ ಪ್ರಕಟಣೆಗೆ ಯಾವುದೇ ತಾಂತ್ರಿಕ ತೊಂದರೆಯಾಗುವುದಿಲ್ಲ. ಈಗಾಗಲೇ ಮೌಲ್ಯಮಾಪಕರು ಹಿಂದಿ ಉತ್ತರ ಪತ್ರಿಕೆಗಳಿಗೂ ಅಂಕಗಳನ್ನೇ ನಮೂದಿಸಿದ್ದಾರೆ.
ಹೀಗಾಗಿ ನಿಗದಿತ ಸಮಯಕ್ಕೇ ಫಲಿತಾಂಶ ಬರಲಿದ್ದು, ಪೋಷಕರು ಆತಂಕಪಡುವ ಅಗತ್ಯವಿಲ್ಲ” ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಕುರಿತ ಮುಂದಿನ ಕಾನೂನು ಕ್ರಮಗಳ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
SSLC Result 2026 ಯಾವಾಗ? ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಈ ಮೊದಲು ಏಪ್ರಿಲ್ 23 ಅಥವಾ 24 ರಂದು ಫಲಿತಾಂಶ ಪ್ರಕಟಿಸುವ ನಿರೀಕ್ಷೆ ಇತ್ತು. ಆದರೆ, ಇಲಾಖೆಯಿಂದ ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಹಾಗೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಪ್ರಸ್ತುತ ಹೈಕೋರ್ಟ್ ಆದೇಶ ಹಾಗೂ ಮುಖ್ಯಮಂತ್ರಿಗಳ ಜೊತೆಗಿನ ಚರ್ಚೆಯ ಕಾರಣದಿಂದಾಗಿ ಏಪ್ರಿಲ್‌ನಲ್ಲಿಯೇ ಫಲಿತಾಂಶ ಬರುವುದು ಬಹುತೇಕ ಅನುಮಾನವಾಗಿದೆ. ಕಳೆದ ಎರಡು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಮೇ 9 ರಂದು ಫಲಿತಾಂಶ ಬಂದಿತ್ತು.
ಮೌಲ್ಯಮಾಪನ ಪೂರ್ಣಗೊಂಡಿದ್ದರೂ, ನ್ಯಾಯಾಲಯದ ಆದೇಶದ ಅನ್ವಯ ಅಂತಿಮ ಪ್ರಕ್ರಿಯೆಗಳಿಗೆ ಸಮಯ ಬೇಕಾಗುವುದರಿಂದ ಈ ವರ್ಷ ಮೇ ತಿಂಗಳ ಮೊದಲ ವಾರದಲ್ಲಿ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.
How to Check Karnataka SSLC Result 2026:
| ಕರ್ನಾಟಕ SSLC ಫಲಿತಾಂಶ 2026 ರ ಹೈಲೈಟ್ಸ್ | |
|---|---|
| ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳು | 8.30 ಲಕ್ಷ (ಬಾಲಕರು: 4.25 ಲಕ್ಷ | ಬಾಲಕಿಯರು: 4.05 ಲಕ್ಷ) |
| ಫಲಿತಾಂಶದ ನಿರೀಕ್ಷಿತ ದಿನಾಂಕ | ಏಪ್ರಿಲ್ 24 ರಂದು ಅಥವಾ ಮೇ ಮೊದಲ ವಾರದಲ್ಲಿ |
| ಅಧಿಕೃತ ವೆಬ್‌ಸೈಟ್‌ಗಳು |
1. karresults.nic.in 2. kseab.karnataka.gov.in |
| ಅಂಕಪಟ್ಟಿ ಡೌನ್‌ಲೋಡ್ ಮಾಡುವ ವಿಧಾನ |
1. ಮೇಲಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. 2. ಮುಖಪುಟದಲ್ಲಿ ‘SSLC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ. 3. ನಿಮ್ಮ ಹಾಲ್ ಟಿಕೆಟ್‌ನಲ್ಲಿರುವ ನೋಂದಣಿ ಸಂಖ್ಯೆ (Registration No) ಮತ್ತು ಜನ್ಮ ದಿನಾಂಕ (DOB) ನಮೂದಿಸಿ. 4. ‘Submit’ ಬಟನ್ ಒತ್ತಿ, ಪರದೆಯ ಮೇಲೆ ಬರುವ ಅಂಕಪಟ್ಟಿಯನ್ನು ಪ್ರಿಂಟ್ ಅಥವಾ PDF ಮಾಡಿಟ್ಟುಕೊಳ್ಳಿ. |
| ಪರ್ಯಾಯ ಆ್ಯಪ್‌ಗಳು | ಸರ್ಕಾರದ ಅಧಿಕೃತ ಡಿಜಿಲಾಕರ್ (DigiLocker) ಮತ್ತು ಕರ್ನಾಟಕ ಒನ್ (KarnatakaOne) ಆ್ಯಪ್ ಮೂಲಕವೂ ಒರಿಜಿನಲ್ ಡಿಜಿಟಲ್ ಅಂಕಪಟ್ಟಿಯನ್ನು ಪಡೆಯಬಹುದು. |
SSC Recruitment 2026: ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ