ಮದುವೆ ಸೀಸನ್ ಹಾಗೂ ಸಾಲು ಸಾಲು ಹಬ್ಬಗಳ ಬೆನ್ನಲ್ಲೇ ಚಿನ್ನ ಖರೀದಿಸಲು ಕಾಯುತ್ತಿರುವ ಗ್ರಾಹಕರಿಗೆ ಮಾರುಕಟ್ಟೆಯಿಂದ ಮತ್ತೆ ಸಿಹಿಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಬಂಗಾರದ ಬೆಲೆಯಲ್ಲಿ ಬುಧವಾರ (ಏಪ್ರಿಲ್ 22) ಇಳಿಕೆ ಕಂಡುಬಂದಿದೆ.
ನಿನ್ನೆ (ಏಪ್ರಿಲ್ 21) ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಆದರೆ ಇಂದು ಹಳದಿ ಲೋಹದ ಬೆಲೆ ಕೆಳಮುಖವಾಗಿ ಚಲಿಸಿದ್ದು, ಆಭರಣ ಖರೀದಿದಾರರಿಗೆ ಕೊಂಚ ನಿರಾಳತೆ ತಂದಿದೆ.
ಮಾರುಕಟ್ಟೆಯಲ್ಲಿ ಇಂದು ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ದರದಲ್ಲಿ ಪ್ರತಿ 1 ಗ್ರಾಂಗೆ 50 ರೂಪಾಯಿ ಇಳಿಕೆಯಾಗಿದ್ದು, 14,185 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಭಾರಿ ಕುಸಿತದೊಂದಿಗೆ 10 ಗ್ರಾಂ ಆಭರಣ ಚಿನ್ನದ ಬೆಲೆ 500 ರೂಪಾಯಿ ಕಡಿಮೆಯಾಗಿ 1,41,850 ರೂಪಾಯಿಗೆ ತಂದು ನಿಂತಿದೆ.
ಅದೇ ರೀತಿ, ಹೂಡಿಕೆದಾರರು ಹೆಚ್ಚು ಒಲವು ತೋರುವ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲೂ ಪ್ರತಿ 1 ಗ್ರಾಂಗೆ 54 ರೂಪಾಯಿ ಇಳಿಕೆಯಾಗಿದ್ದು, 15,475 ರೂಪಾಯಿಗೆ ತಲುಪಿದೆ. ಅಂದರೆ 10 ಗ್ರಾಂ ಶುದ್ಧ ಚಿನ್ನದ ಮೇಲೆ 540 ರೂಪಾಯಿ ಇಳಿಕೆಯಾಗಿದೆ. ಇನ್ನು ಹಗುರವಾದ ಒಡವೆಗಳಿಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ 1 ಗ್ರಾಂಗೆ 41 ರೂಪಾಯಿ ಕುಸಿದು 11,606 ರೂಪಾಯಿಗೆ ಮಾರಾಟವಾಗುತ್ತಿದೆ.
ಇಂದಿನ ಚಿನ್ನದ ಬೆಲೆ: 22-04-2026
22 ಕ್ಯಾರೆಟ್: ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ 10 ಗ್ರಾಂಗೆ ₹500 ಇಳಿಕೆಯಾಗಿದೆ.
| ತೂಕ | ಇಂದಿನ ಬೆಲೆ | ಬೆಲೆ ವ್ಯತ್ಯಾಸ |
|---|---|---|
| 1 ಗ್ರಾಂ | ₹14,185 | ▼ ₹50 ಇಳಿಕೆ |
| 8 ಗ್ರಾಂ | ₹1,13,480 | ▼ ₹400 ಇಳಿಕೆ |
| 10 ಗ್ರಾಂ | ₹1,41,850 | ▼ ₹500 ಇಳಿಕೆ |
24 ಕ್ಯಾರೆಟ್: ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಇಂದು ಪ್ರತಿ 10 ಗ್ರಾಂ ಮೇಲೆ ₹540 ಇಳಿಕೆಯಾಗಿದೆ.
| ತೂಕ | ಇಂದಿನ ಬೆಲೆ | ಬೆಲೆ ವ್ಯತ್ಯಾಸ |
|---|---|---|
| 1 ಗ್ರಾಂ | ₹15,475 | ▼ ₹54 ಇಳಿಕೆ |
| 8 ಗ್ರಾಂ | ₹1,23,800 | ▼ ₹432 ಇಳಿಕೆ |
| 10 ಗ್ರಾಂ | ₹1,54,750 | ▼ ₹540 ಇಳಿಕೆ |
18 ಕ್ಯಾರೆಟ್: ಹಗುರವಾದ ಒಡವೆಗಳ ತಯಾರಿಕೆಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಪ್ರತಿ 10 ಗ್ರಾಂಗೆ ₹410 ಇಳಿಕೆ ಕಂಡಿದೆ.
| ತೂಕ | ಇಂದಿನ ಬೆಲೆ | ಬೆಲೆ ವ್ಯತ್ಯಾಸ |
|---|---|---|
| 1 ಗ್ರಾಂ | ₹11,606 | ▼ ₹41 ಇಳಿಕೆ |
| 10 ಗ್ರಾಂ | ₹1,16,060 | ▼ ₹410 ಇಳಿಕೆ |
(ಸೂಚನೆ: ಮಾರುಕಟ್ಟೆಯ ಈ ದರಗಳಿಗೆ ಶೇಕಡಾ 3 ರಷ್ಟು ಜಿಎಸ್‌ಟಿ ಹಾಗೂ ಆಭರಣ ಮಳಿಗೆಗಳ ತಯಾರಿಕಾ ವೆಚ್ಚ (ಮೇಕಿಂಗ್ ಚಾರ್ಜಸ್) ಸೇರಿರುವುದಿಲ್ಲ. ಹೀಗಾಗಿ ಅಂತಿಮ ಬಿಲ್‌ನಲ್ಲಿ ಕೊಂಚ ವ್ಯತ್ಯಾಸವಿರುತ್ತದೆ).
SSC Recruitment 2026: ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ